ಬೀಜ, ಗೊಬ್ಬರ ಮಾರಾಟ ಮಳಿಗೆಗೆ ಜೆಡಿ ಭೇಟಿ, ಪರಿಶೀಲನೆ
May 29 2024, 12:49 AM ISTದೇವರಹಿಪ್ಪರಗಿ:ಪಟ್ಟಣದ ಕೃಷಿ ಕೇಂದ್ರ ಹಾಗೂ ವಿವಿಧ ರಸಗೊಬ್ಬರ, ಕೀಟನಾಶಕ ಮತ್ತು ಪರಿಕರ ಮಾರಾಟ ಮಳಿಗೆಗಳಿಗೆ ಮಂಗಳವಾರ ಜಿಲ್ಲಾ ಜಂಟಿ ಕೃಷಿ ನಿರ್ದೇಶಕ ವಿಲಿಯಂ.ಡಿ.ರಾಜಶೇಖರ ಭೇಟಿ ನೀಡಿ ರಸಗೊಬ್ಬರ, ಕೀಟನಾಶಕ ಮಾರಾಟ, ದಾಸ್ತಾನುಗಳ ಬಗ್ಗೆ ಮಾಹಿತಿ ಪಡೆದರು. ಅಲ್ಲದೇ, ನಿಯಮಗಳನ್ನು ಪಾಲಿಸುವಂತೆ ಕಟ್ಟು ನಿಟ್ಟಿನ ಸೂಚನೆ ನೀಡಿದರು.