ಸಂಸದರಿಗೆ ಮೋದಿ ಜೊತೆ ಮಾತನಾಡಲು ಧೈರ್ಯ ಕಡಿಮೆ: ಜಾರ್ಜ್
Feb 06 2024, 01:32 AM ISTಬಿಜೆಪಿ ಸಂಸದರು, ರಾಜ್ಯದ ಕೇಂದ್ರ ಸಚಿವರು ಆಸಕ್ತಿ ವಹಿಸಿ ಹಣ ಬಿಡುಗಡೆ ಮಾಡಿಸಲಿ ಎಂದ ರಾಜ್ಯ ಇಂಧನ ಸಚಿವ ಕೆ.ಜೆ. ಜಾರ್ಜ್, ಜನರು ಮತ ಕೊಟ್ಟಿದ್ದು ನಮಗೆ ಮಾತ್ರನಾ ? ನಿಮಗೂ ಜನ ಓಟು ಕೊಟ್ಟಿಲ್ವಾ ? ಎಂದು ಪ್ರಶ್ನಿಸಿದ್ದಾರೆ. ಬಹುಶಃ ನಮ್ಮ ರಾಜ್ಯದ ಸಂಸದರಿಗೆ ಪ್ರಧಾನಿ ಮೋದಿ, ಅಮಿತ್ ಶಾ ಜೊತೆ ಮಾತಾಡಲು ಧೈರ್ಯ ಕಡಿಮೆ ಇದ್ದಾಗೆ ಕಾಣ್ತದೆ ಎಂದು ಸೋಮವಾರ ಉಡುಪಿಯಲ್ಲಿ ಲೇವಡಿ ಮಾಡಿದ್ದಾರೆ.