ವಿದ್ಯಾರ್ಥಿಗಳನ್ನು ಫುಟ್‌ಬೋರ್ಡ್‌ ಮೇಲೆ ನಿಲ್ಲುವಂತೆ ಮಾಡಿದ ಶಕ್ತಿ ಯೋಜನೆ

Jul 24 2025, 12:47 AM IST
ವಿದ್ಯಾರ್ಥಿಗಳು ಚನ್ನರಾಯಪಟ್ಟಣ ತಾಲೂಕು ಕೇಂದ್ರಕ್ಕೆ ವಿದ್ಯಾಭ್ಯಾಸಕ್ಕೆ ಹೋಗಲು ಬೆಳಗಿನ ವೇಳೆಯಲ್ಲಿ ಬಸ್ ವ್ಯವಸ್ಥೆ ಇಲ್ಲದೆ ದಿನನಿತ್ಯ ಪರದಾಡುವ ಪರಿಸ್ಥಿತಿ ತಲೆದೋರಿದೆ. ಈ ಬಗ್ಗೆ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಕೆಎಸ್ಆರ್‌ಟಿಸಿ ನಿಗಮದ ಅಧಿಕಾರಿಗಳಿಗೆ ಮನವಿ ಮಾಡಿದ್ದರೂ ಏನು ಪ್ರಯೋಜನವಾಗಿಲ್ಲ. ಪ್ರತಿದಿನ ಬೆಳಿಗ್ಗೆ 7 ಗಂಟೆಯಿಂದ 8:30ರವರೆಗೆ ಕೇವಲ 2ರಿಂದ 3 ಬಸ್ಸುಗಳು ಮಾತ್ರ ತಿಪಟೂರು ಹಾಗೂ ತುರುವೇಕೆರೆ ಹಾಗೂ ಸ್ಥಳೀಯ ಮಾರ್ಗದಿಂದ ಸಂಚರಿಸುವುದರಿಂದ ಹೋಬಳಿ ಕೇಂದ್ರಕ್ಕೆ ಬರುವ ಮೊದಲೇ ಸರ್ಕಾರದಿಂದ ಮಹಿಳೆಯರಿಗೆ ಉಚಿತ ಪ್ರಯಾಣದ ಗ್ಯಾರಂಟಿಯಿಂದಾಗಿ ಎಲ್ಲಾ ಬಸ್ಸುಗಳು ಸಂಪೂರ್ಣ ಭರ್ತಿಯಾಗಿ ಬರುತ್ತವೆ.