ಇತ್ತೀಚೆಗಷ್ಟೇ ನಿಧನರಾದ ದೇಶ ಕಂಡ ಅಪ್ರತಿಮ ಉದ್ಯಮಿ ರತನ್ ಟಾಟಾ ಅವರು ತಮ್ಮ ಆಸ್ತಿಯ ಮೂರನೇ ಒಂದು ಪಾಲು ಅಂದರೆ ಭರ್ಜರಿ 500 ಕೋಟಿ ರು. ಸಂಪತ್ತನ್ನು ದಶಕಗಳ ಹಿಂದಿನ ತಮ್ಮ ಹಾಸ್ಟೆಲ್ ರೂಂ ಮೇಟ್ ಹೆಸರಿಟ್ಟಿಗೆ ಬರೆದಿಟ್ಟಿರುವ ಅಚ್ಚರಿಯ ವಿಷಯ ಬೆಳಕಿಗೆ ಬಂದಿದೆ.
ಒಬ್ಬ ನಾಯಕನ ನಾಯಕತ್ವವನ್ನು ಕೇವಲ ಸಾಧನೆಗಳಿಂದ ಅಳೆಯಲು ಸಾಧ್ಯವಿಲ್ಲ. ಸಮಾಜದಲ್ಲಿರುವ ಅತ್ಯಂತ ದುರ್ಬಲರ ಬಗ್ಗೆ ಅವರು ತೋರುವ ಕಾಳಜಿಯಿಂದ ಮಾತ್ರ ಅಳೆಯಲಾಗುತ್ತದೆ ಎಂಬುದಕ್ಕೆ ರತನ್ ಟಾಟಾ ಅವರ ಜೀವನ ಮಾದರಿಯಾಗಿದೆ.
ಇತ್ತೀಚೆಗೆ ಇಹಲೋಕ ತ್ಯಜಿಸಿದ ಟಾಟಾ ಉದ್ಯಮ ಸಾಮ್ರಾಜ್ಯದ ಅಧಿಪತಿ ರತನ್ ಟಾಟಾ ಅವರಿಗೆ ನಾಯಿಗಳ ಬಗ್ಗೆ ಇರುವ ಪ್ರೀತಿ ತಿಳಿದಿದೆ. ಆದರೆ, ಅವರು ಬಿಟ್ಟುಹೋದ 10,000 ಕೋಟಿ ರು. ಮೌಲ್ಯದ ಆಸ್ತಿಯಲ್ಲಿ ತಮ್ಮ ನೆಚ್ಚಿನ ಜರ್ಮನ್ ಶೆಫರ್ಡ್ ನಾಯಿ ‘ಟೀಟೂ’ವಿಗೂ ಪಾಲು ನೀಡಿರುವ ಕುತೂಹಲಕರ ಸಂಗತಿ ಬೆಳಕಿಗೆ