ನಗರ ಪರಿಮಿತಿಯ ರಾಜ್ಯ ಹೆದ್ದಾರಿ ನಿರ್ವಹಣೆ ಸ್ಥಳೀಯ ಸಂಸ್ಥೆಗಳಿಗೆ
Oct 20 2025, 01:04 AM ISTಮುಖ್ಯರಸ್ತೆ ಅಗಲೀಕರಣ ವಿಚಾರದಲ್ಲಿ ಸೆಟ್ಬ್ಯಾಕ್ ಸ್ಥಳೀಯ ಸಮಸ್ಯೆ ಮುಖ್ಯರಸ್ತೆ ಅಗಲೀಕರಣ ಬಳಿಕ ಪಟ್ಟಣದ ಪರಿಮಿತಿಯಲ್ಲಿನ 4 ಕಿ.ಮೀ. ರಸ್ತೆಯನ್ನು ಪುರಸಭೆ ವ್ಯಾಪ್ತಿಗೊಳಪಡಿಸಲಿದ್ದು, ಈ ಕುರಿತು ಸರ್ಕಾರದಿಂದ ಆದೇಶ ಕೂಡ ಹೊರಬಿದ್ದಿದೆ. ಇಂತಹ ಸತ್ಯ ಸಂಗತಿ ಮುಚ್ಚಿಟ್ಟ ಅಗಲೀಕರಣ ವಿರೋಧಿಗಳು ಗೊಂದಲ ಮೂಡುವಂತೆ ಸುಳ್ಳು ಸುದ್ದಿ ಹಬ್ಬಿಸುತ್ತಿದ್ದು, ಮುಖ್ಯರಸ್ತೆಯಲ್ಲಿನ ಯಾರಾದರೂ ಕಟ್ಟಡ ಕಟ್ಟುವವರು ನಮ್ಮ ಬಳಿ ಬಂದಲ್ಲಿ ಪುರಸಭೆ ನಿಯಮದಂತೆ ಕಟ್ಟಡ ನಿರ್ಮಿಸಿಕೊಡುವುದಾಗಿ ಶಾಸಕ ಬಸವರಾಜ ಶಿವಣ್ಣನವರ ಭರವಸೆ ನೀಡಿದರು.