ಶಿಕ್ಷಕ ಪುರುಷೋತ್ತಮ್ಗೆ ರಾಜ್ಯ ಪ್ರಶಸ್ತಿ
Sep 07 2025, 01:00 AM ISTಕುಂದೂರು ಹೋಬಳಿಯ ಸುಳಗೋಡು ಗ್ರಾಮದ ಹಿರಿಯ ಪ್ರಾಥಮಿಕ ಪಾಠಶಾಲೆಯ ಶಿಕ್ಷಕ ಪುರುಷೋತ್ತಮ್ ಅವರಿಗೆ ರಾಜ್ಯ ಸರ್ಕಾರದಿಂದ ನೀಡಲಾಗುವ ಉತ್ತಮ ಶಿಕ್ಷಕ ಪ್ರಶಸ್ತಿ ದೊರೆತಿದ್ದು, ಇವರಿಗೆ ಕ್ಷೇತ್ರ ಶಿಕ್ಷಣಾಧಿಕಾರಿ ಕೃಷ್ಣೇಗೌಡ ಅಭಿನಂದನೆ ಸಲ್ಲಿಸಿದ್ದಾರೆ. ಶಾಲೆಯ ಉನ್ನತಿಗಾಗಿ ಶಿಕ್ಷಕ ಪುರುಷೋತ್ತಮ್ ಅವರು ಗ್ರಾಮಸ್ಥರು, ದಾನಿಗಳ ಸಹಕಾರದಿಂದ ಹಾಗೂ ಸ್ವಂತ ಹಣವನ್ನು ಖರ್ಚು ಮಾಡಿ ಶಾಲಾ ವಾಹನವನ್ನು ಖರೀದಿಸಿದ್ದಾರೆ.