ಲೋಕಸಭಾ ಚುನಾವಣೆಯಲ್ಲಿ ರಾಘವೇಂದ್ರರಿಂದ ಷಡ್ಯಂತ್ರ: ಈಶ್ವರಪ್ಪ
May 10 2024, 01:32 AM ISTಈ ಚುನಾವಣೆಯಲ್ಲಿ ರಾಘವೇಂದ್ರರಿಂದ ಷಡ್ಯಂತ್ರ ನಡೆದಿದೆ. ಚುನಾವಣೆಯಲ್ಲಿ ನನ್ನ ಪರ ಜನ ಬಂದಿದ್ದನ್ನು ಕಂಡು ಕಚೇರಿ ಎದುರು ವಾಮಾಚಾರ ಮಾಡಿಸಿದರು. ಶಿರಾಳಕೊಪ್ಪದಲ್ಲಿ ಸಭೆ ನಡೆಸಲು ಬಿಡಲಿಲ್ಲ. ಇದು ಸಾಲದು ಎಂಬಂತೆ ಮತದಾನ ಹಿಂದಿನ ದಿನ ಸಾಮಾಜಿಕ ಜಾಲತಾಣದಲ್ಲಿ ತಿರುಚಿದ ವಿಡಿಯೋ ಮಾಡಿದ್ದಾರೆ. ನನ್ನ ಪರವಾಗಿ ಬಿಜೆಪಿಗೆ ಮತ ಹಾಕಿ ಎನ್ನುವ ರೀತಿಯಲ್ಲಿ ಸುದ್ದಿ ಹಬ್ಬಿಸಿದ್ದಾರೆ.