ವಕ್ಫ್ ಮಂಡಳಿಯ ಆಡಳಿತದಲ್ಲಿ ಪಾರದರ್ಶಕತೆ ತರುವ, ಮಂಡಳಿಯ ಪರಮಾಧಿಕಾರ ಕಟ್ ಮಾಡುವ, ಮಹಿಳೆಯರಿಗೆ ಮತ್ತು ಮುಸ್ಲಿಂ ಸಮುದಾಯದಲ್ಲಿನ ಎಲ್ಲಾ ವರ್ಗಗಳಿಗೂ ಮಂಡಳಿಯಲ್ಲಿ ಅವಕಾಶ ಕೊಡುವ ಐತಿಹಾಸಿಕ ವಕ್ಫ್ ತಿದ್ದುಪಡಿ ವಿಧೇಯಕವನ್ನು ಬುಧವಾರ ಲೋಕಸಭೆಯಲ್ಲಿ ಮಂಡಿಸಲಾಯಿತು.
ವಿಪಕ್ಷ ಕಾಂಗ್ರೆಸ್ ನಾಯಕರನ್ನು ಬುಧವಾರ ಲೋಕಸಭೆಯಲ್ಲಿ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ, ಕರ್ನಾಟಕದಲ್ಲಿ ವಕ್ಫ್ ಮಂಡಳಿಯಲ್ಲಿ ನಡೆದಿದೆ ಎನ್ನಲಾದ ಅಕ್ರಮ, ವಕ್ಫ್ ಆಸ್ತಿ ಕಬಳಿಕೆ ವಿವಾದಗಳನ್ನು ಎಳೆಎಳೆಯಾಗಿ ಪ್ರಸ್ತಾಪಿಸಿ ಬಿಸಿ ಮುಟ್ಟಿಸಿದ್ದಾರೆ.
‘ವಕ್ಫ್ ತಿದ್ದುಪಡಿ ಮಸೂದೆಯಿಂದ ಯಾರಿಗೂ ಅನ್ಯಾಯವಾಗಲ್ಲ. ಇದು ಸಂಸತ್ತಿನಲ್ಲಿ ಜಾತ್ಯಾತೀತ ತೆಯ ಕಠಿಣ ಪರೀಕ್ಷೆ. ರಾಜ್ಯದ ಸಂಸದರು ಇದಕ್ಕೆ ಬೆಂಬಲಿಸಬೇಕು. ಇಲ್ಲದಿದ್ದರೆ ಅವರ ಧಾರ್ಮಿಕ ಮೂಲಭೂತವಾದ ಇತಿಹಾಸದಲ್ಲಿ ದಾಖಲಾಗುತ್ತದೆ’ ಎಂದು ಕೇರಳದಲ್ಲಿ ಚರ್ಚ್ವೊಂದು ಎಚ್ಚರಿಸಿದೆ.
ಬಿಜೆಪಿ ಸದಸ್ಯರ ಆಕ್ಷೇಪ ಹಾಗೂ ಸಭಾತ್ಯಾಗದ ನಡುವೆ ಕೇಂದ್ರ ಸರ್ಕಾರ ಸಂಸತ್ತಿನಲ್ಲಿ ಮಂಡಿಸುತ್ತಿರುವ ವಕ್ಫ್ ತಿದ್ದುಪಡಿ ಮಸೂದೆ-2024 ಅನ್ನು ತಕ್ಷಣ ಹಿಂಪಡೆಯಬೇಕು ಎಂದು ಒತ್ತಾಯಿಸಿ ಕೇಂದ್ರವನ್ನು ಆಗ್ರಹಿಸಲು ವಿಧಾನಸಭೆ ಬುಧವಾರ ನಿರ್ಣಯ ತೆಗೆದುಕೊಂಡಿದೆ.