ಹಾಸನಾಂಬೆ ದರ್ಶನ ಪಡೆದ ನಟ ವಿಜಯ್ ರಾಘವೇಂದ್ರ
Oct 21 2025, 01:00 AM ISTಖ್ಯಾತ ನಟ ವಿಜಯರಾಘವೇಂದ್ರ ಹಾಗೂ ನಿರ್ಮಾಪಕ ಸಾ.ರಾ. ಗೋವಿಂದ್ ಅವರು ಸೋಮವಾರ ಹಾಸನಾಂಬೆ ದೇವಿಯ ದರ್ಶನ ಪಡೆದು ಆಶೀರ್ವಾದ ಪಡೆದರು. ದೂರದೂರಿನಿಂದ ಸಾವಿರಾರು ಭಕ್ತರು ಇಲ್ಲಿ ಆಗಮಿಸಿ ದೇವಿ ದರ್ಶನ ಪಡೆಯುತ್ತಿದ್ದಾರೆ. ದೇವಾಲಯದ ವ್ಯವಸ್ಥೆ ಅಚ್ಚುಕಟ್ಟಾಗಿ, ಶಿಸ್ತಿನ ರೀತಿಯಲ್ಲಿ ನಡೆದಿದೆ. ಎಲ್ಲರಿಗೂ ದರ್ಶನದ ಅವಕಾಶ ದೊರೆಯುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಎಲ್ಲರೂ ದೇವಿಯ ಆಶೀರ್ವಾದದಿಂದ ಆರೋಗ್ಯ, ಸುಖ, ಶಾಂತಿ ಹಾಗೂ ಸಮೃದ್ಧಿ ಹೊಂದಲಿ ಎಂಬುದು ನನ್ನ ಪ್ರಾರ್ಥನೆ ಎಂದರು.