ಕರ್ತವ್ಯನಿರತ ವೈದ್ಯ ವಿದ್ಯಾರ್ಥಿ ಮೇಲೆ ಹಲ್ಲೆ ಖಂಡಿಸಿ ಒಪಿಡಿ ಬಂದ್
Feb 26 2025, 01:05 AM ISTಸರ್ಕಾರಿ ಆಸ್ಪತ್ರೆಯಲ್ಲಿ ಕರ್ತವ್ಯನಿರತ ವೈದ್ಯ ವಿದ್ಯಾರ್ಥಿ ಮೇಲೆ ಬೆಳಗಿನ ಜಾವ ೨ ಗಂಟೆ ಸಮಯದಲ್ಲಿ ರೋಗಿಯ ಕಡೆಯವರು ಹಲ್ಲೆ ಮಾಡಿರುವುದನ್ನು ಖಂಡಿಸಿ ಓಪಿಡಿ ಸೇವೆ ಬಂದ್ ಮಾಡಿ ಆಸ್ಪತ್ರೆ ಆವರಣದಲ್ಲಿ ಹಿಮ್ಸ್ ಆಸ್ಪತ್ರೆಯ ಸಾತ್ನಕೋತ್ತರ ವೈದ್ಯಕೀಯ ವಿದ್ಯಾರ್ಥಿಗಳು ಮಂಗಳವಾರ ತೋಳಿಗೆ ಕಪ್ಪು ಪಟ್ಟಿ ಹಾಕಿ ಪ್ರತಿಭಟನೆ ನಡೆಸಿದರು. ವೈದ್ಯ ರಂಜನ್ ಕುಮಾರ ಅವರನ್ನು ಒದ್ದು ಕಪಾಳಮೋಕ್ಷ ಮಾಡಿ ಹೊಡೆಯುತ್ತಿರುವ ವಿಡಿಯೋ ವೈರಲ್ ಆಗಿದ್ದು, ಇದೇ ರೀತಿ ಮುಂದುವರೆದರೇ ರಾಜ್ಯಾದ್ಯಂತ ಹೋರಾಟ ಮಾಡುವುದಾಗಿ ಎಚ್ಚರಿಸಿದ್ದಾರೆ.