ಆರ್‌ಟಿಇಯಡಿ ಶಿಕ್ಷಣ ಪಡೆದ ವಿದ್ಯಾರ್ಥಿ ಅತಂತ್ರ
Jul 19 2025, 02:00 AM ISTಗಂಗಾವತಿ ತಾಲೂಕಿನ ಡಣಾಪುರ ಗ್ರಾಮದ ನಿವಾಸಿ ದರ್ಶನ ಹೊನ್ನಮ್ಮ ಬಾಗಲವರದ ಸಂಕಷ್ಟಕ್ಕೆ ಸಿಲುಕಿದ್ದಾನೆ. ಗ್ರಾಮದಲ್ಲಿರುವ ಸಾಧನಾ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಆರ್‌ಟಿಇ ಅಡಿ 2017ರಲ್ಲಿ ಪ್ರವೇಶ ಪಡೆದು 8ನೇ ತರಗತಿ ವರೆಗೆ ಶಿಕ್ಷಣ ಪಡೆದಿದ್ದಾನೆ. 9ನೇ ತರಗತಿಗೆ ಪ್ರವೇಶ ಪಡೆಯಲು ಹಣದ ಅಡಚಣೆಯಾಗಿದ್ದು ಮೊರಾರ್ಜಿ ಶಾಲೆಗೆ ಪ್ರವೇಶಾತಿ ನೀಡಬೇಕೆಂದು ಬೇಡಿಕೊಳ್ಳುತ್ತಿದ್ದಾನೆ.