ಶಾಲೆ ವಾತಾವರಣ ವಿದ್ಯಾರ್ಥಿ ಜೀವನ ರೂಪಿಸುವಲ್ಲಿ ನಿರ್ಣಾಯಕ ಪಾತ್ರ-ಶಾಸಕ ಶಿವಣ್ಣನವರ
Feb 10 2025, 01:48 AM ISTಶಾಲಾ ವಾತಾವರಣವು ವಿದ್ಯಾರ್ಥಿಯ ಜೀವನ ರೂಪಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸಲಿದೆ. ಪ್ರಾಥಮಿಕ ಹಂತದಲ್ಲಿ ಕಲಿತದ್ದೇ ಬದುಕಿನ ಅಂತಿಮ ದಿನಗಳವರೆಗೂ ಉಳಿಯಲಿದೆ. ಹೀಗಾಗಿ ಶಾಲೆಗಳಲ್ಲಿನ ಭೌತಿಕ ಪರಿಸರವು ದೈಹಿಕವಾಗಿ, ಸಾಮಾಜಿಕವಾಗಿ ಪೋಷಿಸುವ ಮತ್ತು ಭಾವನಾತ್ಮಕವಾಗಿ ಬೆಂಬಲ ನೀಡುವ ವಾತಾವರಣ ಸೃಷ್ಟಿಸುವುದು ಇಂದಿನ ಅಗತ್ಯಗಳಲ್ಲಿ ಒಂದಾಗಿದೆ ಎಂದು ಶಾಸಕ ಬಸವರಾಜ ಶಿವಣ್ಣನವರ ಅಭಿಪ್ರಾಯ ವ್ಯಕ್ತಪಡಿಸಿದರು.