ವಿದ್ಯುತ್ ಮಿತವಾಗಿ ಬಳಸಿ: ಜೆ.ಟಿ.ಪಾಟೀಲ
Feb 13 2024, 12:47 AM ISTಬಾಗಲಕೋಟೆ; ನಿತ್ಯ ಜೀವನಕ್ಕೆ ಬಹು ಉಪಯುಕ್ತವಾದ ವಿದ್ಯುತ್ ನ್ನು ಸಾರ್ವಜನಿಕರು ಮಿತವಾಗಿ ಬಳಸಿಕೊಳ್ಳಬೇಕೆಂದು ಹಟ್ಟಿ ಚಿನ್ನದ ಗಣಿ ನಿಗಮದ ಅಧ್ಯಕ್ಷ, ಶಾಸಕ ಜೆ.ಟಿ. ಪಾಟೀಲ ಸಲಹೆ ನೀಡಿದರು. ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿ ಅಧೀನದ ಬಾಗಲಕೋಟೆ ಕಾರ್ಯ ಮತ್ತು ಪಾಲನೆ ಗ್ರಾಮೀಣ ಉಪ ವಿಭಾಗದ ವತಿಯಿಂದ ಬೀಳಗಿ ಮತಕ್ಷೇತ್ರ ವ್ಯಾಪ್ತಿಯ ಯಡಹಳ್ಳಿ ಸಾಳಗುಂದಿ, ಆನದಿನ್ನಿ ಕ್ರಾಸ್, ಛಬ್ಬಿ ಗ್ರಾಮಗಳ ಮನೆಗಳಿಗೆ ನಿರಂತರ ವಿದ್ಯುತ್ ಪೂರೈಸುವ ಪೂರ್ಣಗೊಂಡ ಕಾಮಗಾರಿ ಲೋಕಾರ್ಪಣೆಗೊಳಿಸಿ ಮಾತನಾಡಿದರು.