ಕುಡಿವ ನೀರಿಗೆ ಸಮರ್ಪಕ ವಿದ್ಯುತ್ ಸೌಲಭ್ಯ ಒದಗಿಸಿ
Nov 29 2023, 01:15 AM ISTಪಟ್ಟಣದಲ್ಲಿ ೫೬ ಬೋರ್ವೆಲ್ಗಳು, ೨೧ಶುದ್ಧ ಕುಡಿಯುವ ನೀರಿನ ಘಟಕಗಳಿದ್ದರೂ ಸಾರ್ವಜನಿಕರಿಗೆ ಮಾತ್ರ ನೀರಿನ ಸೌಲಭ್ಯದ ದಾಹ ನೀಗಿಸುವಲ್ಲಿ ಪುರಸಭೆ ಅಧಿಕಾರಿಗಳು ಸಂಪೂರ್ಣ ವಿಫಲರಾಗಿದ್ದಾರೆ. ಪಟ್ಟಣಕ್ಕೆ ಎಷ್ಟು ದಿನಗಳಿಗೊಮ್ಮೆ ಕುಡಿಯುವ ನೀರು ಬಿಡುತ್ತಾರೆ ಎಂದು ಸಭೆಯಲ್ಲಿ ಶಾಸಕರು ಕೇಳಿದಾಗ, ಪಿಡಿಒ ರತ್ನಮ್ಮ ೬ ದಿನಗಳಿಗೊಮ್ಮೆ ಬಿಡುತ್ತಾರೆ ಸಾರ್ ಎಂದು ಉತ್ತರಿಸಿದರು. ಫಾರಂ- ೩ ಕೊಡಲು ಫಲಾನುಭವಿಗಳಿಂದ ಹಣ ಪಡೆಯುತ್ತೀರಿ ಎಂದು ಆರೋಪಗಳು ಕೇಳಿಬರುತ್ತಿವೆ. ಜತೆಗೆ ಸಾರ್ವಜನಿಕರು ಫಾರಂಗಾಗಿ ಅಲೆದಾಡುವಂತೆ ಮಾಡುತ್ತೀರಿ ಎಂದು ಮುಖ್ಯಾಧಿಕಾರಿಯನ್ನು ತರಾಟೆಗೆ ತೆಗೆದುಕೊಂಡರು.