ಕಲರವ ಶಿಕ್ಷಕರ ಸೇವಾ ಬಳಗದಿಂದ ನಳನಳಿಸುತ್ತಿರುವ ಸರ್ಕಾರಿ ಶಾಲೆ
Jan 24 2024, 02:01 AM IST2021ರ ಆಗಸ್ಟ್‌ನಲ್ಲಿ ಶಿಕ್ಷಕರ ದಿನಾಚರಣೆ ನಿಮಿತ್ತ ಮಕ್ಕಳಿಗೆ ಏನಾದರೊಂದು ಸೇವೆ ಮಾಡೋಣ ಎಂಬ ಸದುದ್ದೇಶದಿಂದ ಸಮಾನ ಮನಸ್ಕರು ಸೇರಿಕೊಂಡು ಕಲರವ ಶಿಕ್ಷಕರ ಸೇವಾ ಬಳಗ ಕೊಪ್ಪಳ ಎನ್ನುವ ತಂಡ ಕಟ್ಟಿದರು. ಸರ್ಕಾರಿ ಶಾಲೆಗಳ ಸಬಲೀಕರಣಕ್ಕಾಗಿ "ಶಾಲೆ ನಿಮ್ಮದು, ಸೇವೆ ನಮ್ಮದು " ಎನ್ನುವ ಘೋಷವಾಕ್ಯದಡಿ ಸರ್ಕಾರಿ ಶಾಲೆಗಳಿಗೆ ಸ್ವಂತ ಹಣದಲ್ಲಿ ಹಾಗೂ ಶ್ರಮದಾನದ ಮೂಲಕ ಸುಣ್ಣ ಬಣ್ಣ ಹಚ್ಚಿ ಶೃಂಗಾರಗೊಳಿಸುವ ಕಾರ್ಯ ಆರಂಭಿಸಿದರು.