₹1 ಕೋಟಿ ವೆಚ್ಚದಲ್ಲಿ ಶಾಲೆ ಅಭಿವೃದ್ಧಿಪಡಿಸಿದ ಹಳೆ ವಿದ್ಯಾರ್ಥಿಗಳು!
Nov 21 2023, 12:45 AM ISTಕನ್ನಡಪ್ರಭ ವಾರ್ತೆ ಬ್ಯಾಡಗಿಶಿಥಿಲಾವಸ್ಥೆಯಲ್ಲಿದ್ದ ತಾವು ಓದಿದ ಪ್ರಾಥಮಿಕ ಶಾಲೆಯನ್ನು ಹಳೆಯ ವಿದ್ಯಾರ್ಥಿಗಳು ಸೇರಿ ₹1 ಕೋಟಿ ವ್ಯಯಿಸಿ ಅಭಿವೃದ್ಧಿಪಡಿಸಿದ ಘಟನೆ ತಾಲೂಕಿನ ಕದರಮಂಡಲಗಿ ಗ್ರಾಮದಲ್ಲಿ ನಡೆದಿದೆ.ಊರಿನ ಜನರು ಸೇರಿ ದೇವಸ್ಥಾನ, ಮಠಮಂದಿರಗಳನ್ನು ಕಟ್ಟಿದ ಉದಾಹರಣೆಗಳಿವೆ. ಆದರೆ ಇಲ್ಲಿ ಶಾಲೆಯನ್ನು ನಿರ್ಮಿಸುವಂತಹ ಸಂಕಲ್ಪವನ್ನು ಹಳೆಯ ವಿದ್ಯಾರ್ಥಿಗಳು ಮಾಡಿರುವುದು ಬೇರೆ ಊರಿನವರಿಗೆ ಮಾದರಿಯಾಗಿದೆ.