ಮಕ್ಕಳ ಕಲಿಕೆಗೆ ಪ್ರಾಥಮಿಕ ಶಿಕ್ಷಣ ಭದ್ರ ಬುನಾದಿ: ಬಿಇಒ ಸೋಮಶೇಖರಗೌಡ ಪಾಟೀಲ
Mar 07 2025, 12:52 AM ISTಕಲಿಕಾ ಹಬ್ಬ ಮಕ್ಕಳಲ್ಲಿ ಹೊಸ ಚೈತನ್ಯ, ಸ್ಫೂರ್ತಿ ಜತೆಗೆ ಕಲಿಕೆಗೆ ಹೆಚ್ಚು ಪೂರಕವಾಗಿದೆ. ಸರ್ಕಾರ ಇಂತಹ ಕಲಿಕಾ ಹಬ್ಬದಂತಹ ವಿನೂತನ ಕಾರ್ಯಕ್ರಮದ ಮೂಲಕ ಪ್ರತಿಯೊಂದು ಮಕ್ಕಳಲ್ಲಿ ಕಲಿಕಾಸಕ್ತಿ ಹೆಚ್ಚಿಸಿದೆ. ಪ್ರಾಥಮಿಕ ಹಂತದಲ್ಲಿ ಬುನಾದಿ ಸಾಕ್ಷರತೆ ಹಾಗೂ ಸಂಖ್ಯಾ ಜ್ಞಾನದ ಕಲಿಕಾ ಹಬ್ಬ ಆಯೋಜನೆ ಮಕ್ಕಳ ಕಲಿಕೆಗೆ ಹೆಚ್ಚು ಸಹಕಾರಿಯಾಗಿದೆ.