ಶಿಕ್ಷಣ ನಮ್ಮನ್ನು ಶಾಶ್ವತ ಸರಿದಾರಿಯಲ್ಲಿ ನಡೆಸುತ್ತದೆ

Aug 03 2025, 11:45 PM IST
ಶಿಕ್ಷಣದಿಂದ ದೊರೆತ ಜ್ಞಾನ ಶಾಶ್ವತವಾಗಿ ನಮ್ಮನ್ನು ಸರಿ ದಾರಿಯಲ್ಲಿ ನಡೆಸುತ್ತದೆ ಎಂದು ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಹಾಸನ ಮಠದ ಶ್ರೀ ಶಂಭುನಾಥ ಸ್ವಾಮೀಜಿ ಅಭಿಪ್ರಾಯಪಟ್ಟರು. ತಂದೆತಾಯಿಗಳ ಶ್ರಮವರಿತು ವಿದ್ಯಾಭ್ಯಾಸದಲ್ಲಿ ತೊಡಗಿಕೊಳ್ಳುವ ಗುಣ ವಿದ್ಯಾರ್ಥಿಗಳು ಬೆಳೆಸಿಕೊಳ್ಳಬೇಕು. ಜವಾಬ್ದಾರಿ ಅರಿಯದೆ ನಡೆದುಕೊಂಡರೆ ಮುಂದಿನ ಜೀವನ ದುಸ್ತರವಾಗಲಿದೆ. ಸಂಸ್ಕಾರ ಇಲ್ಲದ ಬದುಕು ನಮ್ಮನ್ನು ಸನ್ಮಾರ್ಗದತ್ತ ಕೊಂಡೊಯ್ಯಲಾರದು. ಹಾಗಾಗಿ ಪ್ರತಿಯೊಬ್ಬರ ಬದುಕಿನಲ್ಲಿ ಸಂಸ್ಕಾರ ಅಗತ್ಯ ಎಂದರು. ರಾಜ್ಯದಲ್ಲಿ ಮಾತ್ರವಲ್ಲದೇ ದೇಶದ ವಿವಿಧ ರಾಜ್ಯಗಳಲ್ಲೂ ಬಿಜಿಎಸ್‌ ಶಿಕ್ಷಣ ಸಂಸ್ಥೆಗಳು ಸಮಾಜದಲ್ಲಿ ಶಿಕ್ಷಣ ಬಿತ್ತುವ ಕೆಲಸ ಮಾಡುತ್ತಿದೆ ಎಂದರು.