ಸರ್ಕಾರಿ ಆಸ್ಪತ್ರೆ ವೈದ್ಯರ ನಿರ್ಲಕ್ಷ್ಯದಿಂದ ಬಾಣಂತಿ ಸಾವು; ಸಂಬಂಧಿಕರ ಪ್ರತಿಭಟನೆ
Sep 18 2025, 01:10 AM ISTಪುಲಗಾನಹಳ್ಳಿ ಭಾಗ್ಯಮ್ಮ(30) ಎಂಬವರನ್ನು ಚೊಚ್ಚಲ ಹೆರಿಗೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಸೋಮವಾರ ಬೆಳಗ್ಗೆ ಮಹಿಳೆಗೆ ಹೆರಿಗೆ ನೋವುಂಟಾಗಿ ಗಂಡು ಮಗುವಿಗೆ ಜನ್ಮ ನೀಡಿದ್ದು, ಮಹಿಳೆಗೆ ತೀವ್ರ ರಕ್ತಸ್ರಾವವಾಗುತ್ತಿತ್ತು. ಬಾಣಂತಿಯ ರಕ್ತದ ಗುಂಪು ಮಾಹಿತಿ ನಿಖರವಾಗಿ ನೀಡದ ಕಾರಣ ಸರ್ಕಾರಿ ಸಿಬ್ಬಂದಿ ನಿರ್ಲಕ್ಷಿಸಿದ್ದರಿಂದ ಆಕೆ ಮೃತಪಟ್ಟಿದ್ದಾಳೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.