ಸರ್ಕಾರಿ ಶಾಲೆ ಮಕ್ಕಳು ದೊಡ್ಡ ಕನಸು ಕಾಣಿ
Jul 25 2025, 12:30 AM ISTಸರ್ಕಾರಿ ಶಾಲೆಗಳಲ್ಲಿ ಓದುತ್ತಿರುವ ಪ್ರತಿಯೊಬ್ಬ ವಿದ್ಯಾರ್ಥಿಗಳು ಒಂದೊಂದು ದೊಡ್ಡದಾದ ಕನಸು ಹೊಂದಬೇಕು, ಆ ಕನಸನ್ನು ನನಸು ಮಾಡಲು ತಮ್ಮ ಜೀವನದಲ್ಲಿ ಶಿಸ್ತು, ಸಂಯಮ, ಶ್ರದ್ಧೆ ಮೈಗೂಡಿಸಿಕೊಂಡು ಸಮಾಜಕ್ಕೆ ಉತ್ತಮವಾದ ಕೊಡುಗೆ ನೀಡಬೇಕೆಂದು ನಿವೃತ್ತ ಅಪರ ಅಬಕಾರಿ ಆಯುಕ್ತರಾದ ಎಚ್ ಪಿ ಈರಪ್ಪ ತಿಳಿಸಿದರು. ಹೋಬಳಿಯ ಹನ್ಯಾಳಿನ ಸರ್ಕಾರಿ ಪ್ರಾಥಮಿಕ, ಪ್ರೌಢಶಾಲೆ ಹಾಗೂ ಮಕ್ಕಳ ಮನೆಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಶ್ರೀ ಪ್ರಸನ್ನ ವೀರಭದ್ರೇಶ್ವರ ಸ್ವಾಮಿ ಚಾರಿಟಬಲ್ ಟ್ರಸ್ಟ್ ಕೇರಳಾಪುರ ವತಿಯಿಂದ ಸುಮಾರು 1 ಲಕ್ಷ ರು. ವೆಚ್ಚದಲ್ಲಿ ಕೊಡುಗೆಯಾಗಿ ನೀಡಿದ ಬ್ಯಾಗ್‌ಗಳನ್ನು ವಿತರಿಸಿದರು.