ಸರ್ಕಾರಿ ಶಾಲಾ ಕಾಲೇಜುಗಳ ಉಳಿವು ನಮ್ಮೆಲ್ಲರ ಹೊಣೆ
Aug 04 2025, 11:45 PM ISTಸರ್ಕಾರಿ ಶಾಲೆ ಕಾಲೇಜುಗಳ ಉಳಿವು ಪ್ರತಿಯೊಬ್ಬರ ಹೊಣೆಯಾಗಿದೆ. ಕೇವಲ ಖಾಸಗಿ ಶಾಲೆಗಳ ಹೆಸರಿಗೆ ಮಾರುಹೋಗಿ ಸರ್ಕಾರಿ ಶಾಲಾಕಾಲೇಜುಗಳನ್ನು ಕಡೆಗಣಿಸುತ್ತಿದ್ದು ಇದು ನಿಲ್ಲಬೇಕು ಅರಕಲಗೂಡು ಕ್ಷೇತ್ರದ ಶಾಸಕರಾದ ಎ ಮಂಜು ತಿಳಿಸಿದರು. ನಮ್ಮ ತಾಲೂಕಿನ ಸಾರ್ವಜನಿಕರು, ಪೋಷಕರು ಮತ್ತು ತಾಲೂಕಿನ ಸರ್ಕಾರಿ ವಿದ್ಯಾಲಯ, ಶಾಲೆಗಳ ಉಳಿವಿಗಾಗಿ ವಿದ್ಯಾರ್ಥಿಗಳನ್ನು ಸೇರಿಸಿ ಸರ್ಕಾರಿ ಶಾಲೆ ಕಾಲೇಜು ಉಳಿಸಬೇಕು. ಸಕಾರಿ ಶಾಲೆಗಳ ಉಳಿವು ನಮ್ಮೆಲ್ಲರ ಹೊಣೆ ಎಂದು ತಿಳಿಸಿದರು.