ಸರ್ಕಾರಿ ಶಾಲೆ ಉಳಿಸಲು ಮನೆಮನೆಗೆ ತೆರಳಿ ಜಾಗೃತಿ ಅಭಿಯಾನ
Apr 21 2025, 12:52 AM ISTನ್ಯಾಷನಲ್ ಹ್ಯೂಮನ್ ರೈಟ್ಸ್ ವತಿಯಿಂದ ಕೊರೋನಾ ಕಾಲದಲ್ಲಿ ಸೋಂಕಿತರಿಗಾಗಿ ಕೇಂದ್ರಗಳನ್ನು ಸ್ಥಾಪಿಸಿ ಚಿಕಿತ್ಸೆ ಕೊಡಿಸಲಾಗಿದೆ. ಹಸಿದವರಿಗೆ ಊಟ, ತಿಂಡಿ ನೀಡಲಾಗಿದೆ. ಆಗಾಗ್ಗೆ ಆರೋಗ್ಯ ಶಿಬಿರಗಳು, ಬಡವರಿಗೆ ಸಹಾಯ ಮಾಡುವುದು ಹಾಗೂ ಸರಕಾರಿ ಶಾಲೆಗಳಿಗೆ ಪ್ರೋತ್ಸಾಹ ನೀಡುವ ಕೆಲಸ ಮಾಡಲಾಗುತ್ತಿದೆ. ಇನ್ನು ಅನೇಕ ಶಾಲೆಗಳಿಗೆ ಸ್ಮಾರ್ಟ್ ಕ್ಲಾಸ್ ಅನ್ನು ಕೊಡುಗೆಯಾಗಿ ನೀಡಲಾಗಿದೆ. ಸಮಾಜ ಸೇವೆಗಳಲ್ಲಿ ನಮ್ಮ ಟ್ಸಸ್ಟ್ ಅನೇಕ ಕಾರ್ಯಕ್ರಮಗಳನು ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.