ಸಾಮಾಜಿಕ ಬದ್ಧತೆ ಬೆಳೆಸುವ ಸ್ಕೌಟ್ಸ್ ಕಡ್ಡಾಯವಾಗಬೇಕು: ಕೆ.ಎಂ. ಸುನೀತಾ
Apr 13 2025, 02:06 AM ISTಚಿಕ್ಕಮಗಳೂರು, ಶಿಸ್ತು, ಸಮಯಪ್ರಜ್ಞೆ, ಹೊರಾಂಗಣ ಚಟುವಟಿಕೆ, ನೈತಿಕ ಕಟ್ಟುಪಾಡು, ಸಾಮಾಜಿಕ ಕಳಕಳಿ ಹೀಗೆ ಹಲವು ಆದರ್ಶಗಳ ಮೂಲಕ ಜವಾಬ್ದಾರಿಯುತ ಯುವಕ ಯುವತಿಯರನ್ನು ರೂಪಿಸಲು ಶ್ರಮಿಸುತ್ತಿರುವ ಸ್ಕೌಟ್, ಗೈಡ್ ಚಳುವಳಿ ಎಲ್ಲ ಶಾಲೆಗಳಲ್ಲೂ ಕಡ್ಡಾಯವಾಗುವುದು ಸೂಕ್ತ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕಿ (ಅಭಿವೃದ್ಧಿ) ಕೆ.ಎಂ. ಸುನಿತಾ ಅವರು ಹೇಳಿದರು.