ನಾನು ಮುಡಾ ಆಯುಕ್ತರಿಗೆ ಯಾವುದೇ ಪತ್ರ ಬರೆದಿಲ್ಲ. ನಮ್ಮ ಕಾಲದಲ್ಲಿ ಅಲ್ಲ ಹಿಂದಿನ ಕಾಲದಿಂದಲೂ 50:50 ಅನುಪಾತ ಜಾರಿಯಲ್ಲಿದೆ. ಆದರೆ, ನನ್ನ ಅವಧಿಯಲ್ಲಿ 50:50 ಅನುಪಾತದಡಿಯಲ್ಲಿ 10 ಅಡಿ ಜಾಗವನ್ನು ಕೊಟ್ಟಿಲ್ಲ. ರೈತರನ್ನ ಕೇಳಿದಾಗ 50:50 ಅನುಪಾತಕ್ಕೆ ಯಾರೂ ಒಪ್ಪಲಿಲ್ಲ.
ಅಬಕಾರಿ ಇಲಾಖೆಯಿಂದ ₹ 700 ಕೋಟಿ ತಂದು ಮಹಾರಾಷ್ಟ್ರದಲ್ಲಿ ಚುನಾವಣೆ ಮಾಡುತ್ತಿದ್ದಾರೆ ಎಂದು ಪ್ರಧಾನಿ ಮೋದಿಯವರು ನಮ್ಮ ಮೇಲೆ ಹೊಸ ಸುಳ್ಳಿನ ಆರೋಪ ಮಾಡಿದ್ದಾರೆ. ಮೋದಿ ಅವರು ಹೇಳಿದ್ದು ಸಾಬೀತು ಮಾಡಿದರೆ ನಾನು ರಾಜಕೀಯ ನಿವೃತ್ತಿ ಘೋಷಿಸ್ತೀನಿ - ಸಿಎಂ ಸಿದ್ದರಾಮಯ್ಯ ನೇರ ಸವಾಲು
ಗಾಲಿ ಜನಾರ್ದನ ರೆಡ್ಡಿ ಜುಜುಬಿ ರಾಜಕಾರಣಿ. ಆತನಿಗೆ ನಾಚಿಕೆ, ಮಾನ, ಮರ್ಯಾದೆಗಳಿಲ್ಲ. ನನ್ನ ವಿರುದ್ಧ ಏಕವಚನದಲ್ಲಿ ಮಾತನಾಡುವ ಯೋಗ್ಯತೆ ಆತನಿಗಿಲ್ಲ ಎಂದು ಸಿಎಂ ಸಿದ್ದರಾಮಯ್ಯ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.