ಮುಂದೊಂದು ದಿನ ನಾನು ಸಿಎಂ ಆಗುತ್ತೇನೆ
Sep 09 2024, 01:36 AM ISTಕನ್ನಡಪ್ರಭ ವಾರ್ತೆ ವಿಜಯಪುರ ನಾನು ಒಂದು ದಿನ ಸಿಎಂ ಆಗುತ್ತೇನೆ. ಅಸೆ ಇದೆ, ದುರಾಸೆ ಇಲ್ಲ. ನೀರಾವರಿ ಮಂತ್ರಿಯಾಗಿ ಉತ್ತಮ ಕೆಲಸ ಮಾಡಿದ್ದೇನೆ. ನಾನು ಸಿಎಂ ಆದರೆ ವಿಜಯಪುರ ಜಿಲ್ಲೆಯ ಜನರಿಗೆ, ರಾಜ್ಯದ ಜನರಿಗೆ ಖುಷಿಯಾಗುತ್ತದೆ. ಒಳ್ಳೆಯ ಕೆಲಸ ಮಾಡುವೆ. ಈಗ ಸಿಎಂ ಸ್ಥಾನದ ಮೇಲೆ ಕೈ ಹಾಕಲ್ಲ. ಸ್ವಯಂ ಘೋಷಿತವಾಗಿ ಸಿಎಂ ಆಗಲು ಬರಲ್ಲ. ಸಿಎಂ ಮಾಡುವ ತೀರ್ಮಾನ ಪಕ್ಷದ ಹೈಕಮಾಂಡ್ ಹಾಗೂ ಶಾಸಕರು ತೀರ್ಮಾನ ಮಾಡುತ್ತಾರೆ. ಯಾರನ್ನು ತೆಗೆದು ಹಾಕೋ ಕೆಲಸಕ್ಕೆ ನಾನು ಕೈ ಹಾಕಲ್ಲ ಎಂದು ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ ವಿಶ್ವಾಸ ವ್ಯಕ್ತಪಡಿಸಿದ್ದಾರೆ.