ಬಸವೇಶ್ವರರ ತತ್ವಾದರ್ಶ ಅಳವಡಿಸಿಕೊಳ್ಳಿ: ಶಾಸಕ ಎಚ್. ಕೆ. ಸುರೇಶ್
May 10 2024, 11:45 PM IST ೧೨ ನೇ ಶತಮಾನದಲ್ಲಿ ಕರ್ನಾಟಕದಲ್ಲಿ ನಡೆದ ಸಾಮಾಜಿಕ, ಧಾರ್ಮಿಕ ಕ್ರಾಂತಿಯನ್ನು ವಿಶ್ವದ ಇತಿಹಾಸದಲ್ಲಿ ಸುವರ್ಣಾಕ್ಷರಗಳಲ್ಲಿ ಬರೆದಿಡಬೇಕು. ಜಡ್ಡುಗಟ್ಟಿದ ಸಮಾಜದಲ್ಲಿನ ಅರ್ಥರಹಿತ ಅಚಾರ-ವಿಚಾರಗಳಿಂದ, ಮೇಲು-ಕೀಳು ಎಂಬ ಭಾವನೆಗಳಿಂದ, ಸ್ತ್ರೀ- ಪುರುಷ ಎಂಬ ಲಿಂಗಬೇಧ, ತಾರತಮ್ಯದಿಂದ, ಶ್ರೀಮಂತ-ಬಡವ ಎಂಬ ಅಂತರದ ಸಂಘರ್ಷದಿಂದ ಸಾಮಾಜಿಕ ವ್ಯವಸ್ಥೆ ರೋಸಿ ಹೋಗಿತ್ತು. ಇದರ ವಿರುದ್ಧ ಹೋರಾಟ ನಡೆಸಿದ ಬಸವಣ್ಣನವರ ಸಾಧನೆ ಎಂದಿಗೂ ಶ್ಲಾಘನೀಯ.