ಧೀಮಂತ ಶ್ಯಾಮ್ ಪ್ರಸಾದ್ ರ ವ್ಯಕ್ತಿತ್ವ ಪ್ರೇರಣಾದಾಯಕ: ಶಾಸಕ ಎಚ್.ಕೆ.ಸುರೇಶ್
Jul 07 2024, 01:23 AM ISTಸ್ವತಂತ್ರ ಭಾರತದ ಮೊದಲ ಕೈಗಾರಿಕೆ ಮತ್ತು ಸರಬರಾಜು ಮಂತ್ರಿ ಮತ್ತು ಭಾರತೀಯ ಜನಸಂಘದ ಸಂಸ್ಥಾಪಕರಾದ ಡಾ.ಶ್ಯಾಮ ಪ್ರಸಾದ್ ಮುಖರ್ಜಿಯವರ ದೃಢ ಸಂಕಲ್ಪಗಳು, ಯಾವುದೇ ಸಂದರ್ಭದಲ್ಲೂ ಅಲ್ಲಾಡದೇ ಅಚಲವಾಗಿ ನಿಂತಿದ್ದವು. ರಾಷ್ಟ್ರೀಯತೆಯ ಪರವಾದ ಹೋರಾಟದಲ್ಲಿ ತಮ್ಮ ಪ್ರಾಣವನ್ನೂ ಲೆಕ್ಕಿಸದ ಅವರ ಆ ಮನೋಸ್ಥೈರ್ಯ ಹಾಗೂ ಅಂತಿಮವಾಗಿ ಅವರ ತ್ಯಾಗದ ಕುರಿತ ಇತಿಹಾಸವನ್ನು ಸಮಸ್ತ ಭಾರತೀಯರು ಅರಿತುಕೊಳ್ಳಬೇಕು.