ಹಿಂದೂ ಸಮಾಜ ಜಾಗೃತಗೊಳಿಸಲು ರಥಯಾತ್ರೆ
Oct 09 2023, 12:47 AM ISTಹಿಂದೂ ಸಮಾಜ ಜಾಗೃತಗೊಳಿಸಲು ಹಾಗೂ ನಮ್ಮ ಯುವಸಮೂಹವನ್ನು ಬಡಿದೆಬ್ಬಿಸುವ ಉದ್ದೇಶದಿಂದ ಇಂದು ದೇಶದೆಲ್ಲೆಡೆ ಶೌರ್ಯ ಜಾಗರಣಾ ರಥಯಾತ್ರೆ ನಡೆಸಲಾಗುತ್ತಿದೆ ಎಂದು ಹಳಿಯಾಳ ತಾಲೂಕು ವಿಶ್ವ ಹಿಂದೂ ಪರಿಷತ್ ಅಧ್ಯಕ್ಷ ಶ್ರೀಪತಿ ಭಟ್ ಹೇಳಿದರು.ಭಾನುವಾರ ಸಂಜೆ ಶ್ರೀ ಗಣೇಶ ದೇವಸ್ಥಾನದ ಬಳಿ ತಾಲೂಕು ವಿ.ಎಚ್.ಪಿ ಮತ್ತು ಭಜರಂಗದಳದವರು ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಪಟ್ಟಣಕ್ಕೆ ಆಗಮಿಸಿದ ಶೌರ್ಯ ಜಾಗರಣಾ ಯಾತ್ರೆ ಬರಮಾಡಿಕೊಂಡು ಮಾತನಾಡಿದರು.