ಕೇರಳದಲ್ಲಿ ನಾಯಕರೊಬ್ಬರು ಶತ್ರುಸಂಹಾರ ಯಾಗ ಮಾಡಿಸಿದ ಕೆಲವೇ ದಿನಗಳಲ್ಲಿ ಸಿದ್ದರಾಮಯ್ಯನವರಿಗೆ ಕಾಲು ನೋವು ಸಮಸ್ಯೆ ಕಾಣಿಸಿಕೊಂಡಿತ್ತು ಎಂದು ಬಿಜೆಪಿಯಿಂದ ಉಚ್ಚಾಟನೆಗೊಂಡಿರುವ ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದರು
ಸತತ 2 ಗೆಲುವಿನೊಂದಿಗೆ ಈ ಬಾರಿ ಟೂರ್ನಿಯಲ್ಲಿ ಅಭಿಯಾನ ಆರಂಭಿಸಿದ್ದರೂ ಬಳಿಕ ತನ್ನದೇ ತವರಿನಲ್ಲಿ ಎದುರಾದ ಸೋಲು ಆರ್ಸಿಬಿಯನ್ನು ಕುಗ್ಗಿಸಿದೆ. ವಾಂಖೆಡೆ ಕ್ರೀಡಾಂಗಣದಲ್ಲಿ ಮುಂಬೈ ಇಂಡಿಯನ್ಸ್ನ ಎದುರಿಸಲಿರುವ ಆರ್ಸಿಬಿ, ಗೆಲುವಿನ ಹಳಿಗೆ ಮರಳಲು ಕಾಯುತ್ತಿದೆ.
: ಐಪಿಎಲ್ನಿಂದ ನಿವೃತ್ತಿಯಾಗುವ ಬಗ್ಗೆ ಭಾರತದ ದಿಗ್ಗಜ ಕ್ರಿಕೆಟಿಗ ಎಂ.ಎಸ್.ಧೋನಿ ಮೌನ ಮುರಿದಿದ್ದಾರೆ. ನಿವೃತ್ತಿಯ ಬಗ್ಗೆ ನಾನಲ್ಲ, ನನ್ನ ದೇಹ ನಿರ್ಧರಿಸುತ್ತದೆ ಎಂದು ಹೇಳಿದ್ದಾರೆ.
‘ಒಂದು ರಾಜ್ಯ ಒಂದು ಪ್ರಾದೇಶಿಕ ಗ್ರಾಮೀಣ ಬ್ಯಾಂಕ್’ ಯೋಜನೆಯನ್ನು ಕೇಂದ್ರ ಹಣಕಾಸು ಸಚಿವಾಲಯ ಶೀಘ್ರದಲ್ಲೇ ಜಾರಿಗೆ ತರಲಿದೆ. ಅದರಂತೆ ಕರ್ನಾಟಕದಲ್ಲಿ ಈಗಿರುವ ಕರ್ನಾಟಕ ಗ್ರಾಮೀಣ ಬ್ಯಾಂಕ್ ಮತ್ತು ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ಗಳು ವಿಲೀನಗೊಂಡು ಒಂದೇ ಆಗಲಿವೆ.
ಪ್ರವಾಸಿತಾಣ ಕೆಆರ್ಎಸ್ ಬೃಂದಾವನದಲ್ಲಿ ಶನಿವಾರ ಪ್ರವಾಸಕ್ಕೆ ಬಂದಿದ್ದ ಮಹಿಳೆಯರೊಂದಿಗೆ ಅಸಭ್ಯ ವರ್ತನೆ ತೋರಿದ ಕೇರಳದ ಪ್ರವಾಸಿಗನಿಗೆ ಸಾರ್ವಜನಿಕರು ಥಳಿಸಿದ ಪರಿಣಾಮ ಆತ ಮೃತಪಟ್ಟಿರುವ ಘಟನೆ ನಡೆದಿದೆ.
ರಾಮ ಧರೆಗವತರಿಸಿದ ಪುಣ್ಯ ದಿನವೇ ಶ್ರೀರಾಮನವಮೀ
-ಧರ್ಮ ಕಾರ್ಯ-ರಾಮನ ನೆಪದಲ್ಲಿ ಪ್ರಸಾದ ರೂಪದಲ್ಲಿ ಹೆಸರುಬೇಳೆ ಸ್ವೀಕರಿಸುವುದರಿಂದ ಉಷ್ಣ ಕಾಲದಲ್ಲಿ ದೇಹವೂ ತಂಪು
ಕ್ರೈಮ್ ರಿಪೋರ್ಟರ್ ಕಂಡಂತೆ ಐಪಿಎಸ್ ಮೇಘರಿಕ್
ರಾಜಸ್ಥಾನ ಮೂಲದ ದಕ್ಷ ಅಧಿಕಾರಿಯ ಘನತೆಯ ಘಟನೆಗಳು
1984ರಲ್ಲಿ 2 ಸ್ಥಾನದಲ್ಲಿ ಗೆಲುವು ಪಡೆದಿದ್ದ ಪಕ್ಷ ಇಂದು 18 ಕೋಟಿ ಸದಸ್ಯರ ದೊಡ್ಡ ಕುಟುಂಬವನ್ನು ಹೊಂದಿದೆ. 370ರ ರದ್ಧತಿ, ರಾಮ ಮಂದಿರ, ತ್ರಿವಳಿ ತಲಾಖ್ ರದ್ಧತಿ, ವಕ್ಫ್ ತಿದ್ದುಪಡಿ ಕಾಯ್ದೆಯಂತಹ ಹಲವು ಮಹತ್ವದ ಮೈಲಿಗಲ್ಲನ್ನು ಸಾಧಿಸಿದೆ.
ಮೂಲಗಳು ಹೇಳುವ ಪ್ರಕಾರ, ಸಂಪುಟ ಪುನಾರಚನೆ ಮತ್ತು ಹೊಸ ಅಧ್ಯಕ್ಷರ ಆಯ್ಕೆ ಒಂದೇ ಸಮಯಕ್ಕೆ ನಡೆದರೆ ಒಳ್ಳೆಯದು ಎಂಬ ಅಭಿಪ್ರಾಯದಲ್ಲಿ ಹೈಕಮಾಂಡ್ ಇದೆ.
ರಾಜ್ಯ ಸಹಕಾರ ಮಂತ್ರಿ ಕೆ.ಎನ್.ರಾಜಣ್ಣ ವಿರುದ್ಧದ ಹನಿಟ್ರ್ಯಾಪ್ ಯತ್ನ ಆರೋಪಕ್ಕೆ ಸಂಬಂಧಿಸಿ ಯಾವುದೇ ಪುರಾವೆಗಳು ಲಭ್ಯವಾಗಿಲ್ಲ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರಿಗೆ ಅಪರಾಧ ತನಿಖಾ ಇಲಾಖೆ (ಸಿಐಡಿ)ಯ ಡಿಜಿಪಿ ಡಾ.ಎಂ.ಎ.ಸಲೀಂ ಮೌಖಿಕವಾಗಿ ವಿವರಣೆ ನೀಡಿದ್ದಾರೆ ಎನ್ನಲಾಗಿದೆ.