ಹೊಸ ಪಕ್ಷ ಸ್ಥಾಪನೆ ಕುರಿತಂತೆ ಬರುವ ವಿಜಯದಶಮಿ ವೇಳೆಗೆ ರಾಜಕೀಯ ನಿರ್ಧಾರ ಕೈಗೊಳ್ಳುವುದಾಗಿ ಹೇಳಿ ಕುತೂಹಲ ಹುಟ್ಟುಹಾಕಿದ್ದ ಬಿಜೆಪಿ ಉಚ್ಚಾಟಿತ ನಾಯಕ ಬಸನಗೌಡ ಪಾಟೀಲ ಯತ್ನಾಳ, ‘ನಾನು ಪಕ್ಷಕ್ಕೆ ವಾಪಸ್ ತೆಗೆದುಕೊಳ್ಳಿ ಎಂದು ಯಾರಿಗೂ ಕೈ ಮುಗಿಯಲ್ಲ, ಕೈಕಾಲು ಹಿಡಿಯಲ್ಲ’ ಎಂದಿದ್ದಾರೆ.
ಹಾಲು ಸೇರಿ ವಿವಿಧ ಅಗತ್ಯ ವಸ್ತು, ಸೇವೆಗಳ ಬೆಲೆ ಏರಿಕೆ ವಿರೋಧಿಸಿ ರಾಜ್ಯ ಸರ್ಕಾರದ ವಿರುದ್ಧ ಪ್ರತಿಪಕ್ಷ ಬಿಜೆಪಿ ಬುಧವಾರ ಅಹೋರಾತ್ರಿ ಧರಣಿ ನಡೆಸಲಿದೆ. ಈ ಮೂಲಕ ಏ.13ರವರೆಗೆ ವಿವಿಧ ಹಂತಗಳಲ್ಲಿ ಈ ಕುರಿತು ನಡೆಸುವ ಹೋರಾಟಕ್ಕೆ ಅಧಿಕೃತವಾಗಿ ಚಾಲನೆ ನೀಡಲಿದೆ.
ಏ.1ರ ಮಂಗಳವಾರದಿಂದ ಜಾರಿಗೆ ಬರುವಂತೆ ಹಾಲು, ಮೊಸರು, ವಿದ್ಯುತ್ ದರ ಏರಿಕೆ ಮಾಡಿದ್ದ ರಾಜ್ಯ ಸರ್ಕಾರ ಇದೀಗ ಡೀಸೆಲ್ ಬೆಲೆಯನ್ನೂ ಹೆಚ್ಚಿಸಿ ಗ್ರಾಹಕರಿಗೆ ಮತ್ತೊಂದು ದರ ಏರಿಕೆ ಶಾಕ್ ನೀಡಿದೆ.
‘ನನ್ನ ಗೆಲುವಿಗೆ ಯಡಿಯೂರಪ್ಪ ಅವರ ಶ್ರಮವಿದೆ. ಎಲ್ಲರೂ ಸೇರಿ ಪ್ರಯತ್ನ ಮಾಡಿ ನನ್ನನ್ನು ಗೆಲ್ಲಿಸಿದ್ದಾರೆ. ನನ್ನ ಗೆಲುವಿಗೆ ಎಲ್ಲ ಕಾರ್ಯಕರ್ತರು, ವರಿಷ್ಠರು ಪ್ರಾಮಾಣಿಕ ಪ್ರಯತ್ನ ಮಾಡಿದ್ದಾರೆ’ ಎಂದು ಚಿತ್ರದುರ್ಗ ಸಂಸದ ಗೋವಿಂದ ಕಾರಜೋಳ ಹೇಳಿದರು.
ಬಂದೂಕುಗಳು ಇದ್ದರೂ ಮಹದೇವಪ್ಪನವರು ಅಹಿಂಸಾ ತತ್ವಕ್ಕೆ ಕಟ್ಟಿಬದ್ದರಾಗಿದ್ದರಿಂದ ಯಾರೂ ಗುಂಡು ಹಾರಿಸಬಾರದೆಂದು ಆಜ್ಞೆ ಮಾಡಿಬಿಟ್ಟರು. ಆದರೆ ಎದುರಾಳಿಗಳ 3-4 ಬುಲೆಟ್ಗಳು ಮೈಲಾರರ ಎದೆ ಸೀಳಿಬಿಟ್ಟವು. ಅಹಿಂಸೆ ಅಹಿಂಸೆ... ಭಾರತ್ ಮಾತಾ ಕಿ ಜೈ ಎನ್ನುತ್ತಾ ಅವರು ನೆಲಕ್ಕುರುಳಿದರು
ಪೂಜ್ಯರು ಮಠದ ಆರ್ಥಿಕತೆಗಿಂತ ಅಡುಗೆ ಉಗ್ರಾಣದಲ್ಲಿರುವ ಅಕ್ಕಿಬೇಳೆಗಳ ಕಡೆಗೆ ಸದಾ ಗಮನ. ಏಕೆಂದರೆ, ಹಸಿದ ಹೊಟ್ಟೆಗೆ ಶಿವ ಭಕ್ತಿ ತಲುಪದು ಎಂಬುದು ಅವರ ನಿಲುವಾಗಿತ್ತು. ಹಾಗಾಗಿ ನಾವು ಅವರ ದಾಸೋಹ ಪ್ರಜ್ಞೆಯನ್ನು ಅನುಸರಿಸಬೇಕು. ನಮ್ಮ ಜೀವನದಲ್ಲಿ ಹಸಿದ ಹೊಟ್ಟೆಗಳಿಗೆ ಉಣಬಡಿಸಿ ಪುಣ್ಯದ ಪಾಲು ಪಡೆಯಬೇಕು.
ದುಬೈನಿಂದ ಚಿನ್ನ ಸಾಗಿಸುವ ಮುನ್ನ ತನ್ನ ಗೆಳೆಯ ಹಾಗೂ ಬಳ್ಳಾರಿ ಚಿನ್ನದ ವ್ಯಾಪಾರಿ ಸಾಹಿಲ್ ಸಕಾರಿಯಾ ಜೈನ್ಗೆ ನಟಿ ರನ್ಯಾ ರಾವ್ ಅವರು ವಾಟ್ಸಪ್ನಲ್ಲಿ ಮೆಸೇಜ್ ಮಾಡಿದ್ದರು ಎಂಬ ಸಂಗತಿ ಡಿಆರ್ಐ ತನಿಖೆಯಲ್ಲಿ ಪತ್ತೆಯಾಗಿದೆ.
ಮಂಗಳವಾರದಿಂದ ಹಾಲು, ಮೊಸರಿನ ದರ ಹೆಚ್ಚಳವಾಗುವ ಹಿನ್ನೆಲೆಯಲ್ಲಿ ಹೋಟೆಲ್ಗಳಲ್ಲಿ ಚಹ, ಕಾಫಿ ಸೇರಿದಂತೆ ಹಾಲಿನ ಖಾದ್ಯ, ಸಿಹಿ ತಿನಿಸುಗಳ ಬೆಲೆಯಲ್ಲೂ ಏರಿಕೆಯಾಗಲಿದೆ.
ಬಿಸಿಲಿನ ಬೇಗೆಯ ನಡುವೆ ರಾಜ್ಯದ ಕರಾವಳಿ ಮತ್ತು ದಕ್ಷಿಣ ಒಳನಾಡಿನಲ್ಲಿ ಮುಂದಿನ ಐದು ದಿನಗಳ ಅವಧಿಯಲ್ಲಿ ಗುಡುಗು ಸಹಿತ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ.
ಜವಹಾರ್ಲಾಲ್ ನೆಹರು ತಾರಾಲಯದ ಸ್ಕೈ ಥಿಯೇಟರ್ ಪ್ರವೇಶ ಶುಲ್ಕವೂ ಶೇ.25ರಷ್ಟು ಹೆಚ್ಚಳವಾಗಿದೆ. ವಯಸ್ಕರ ಪ್ರವೇಶಕ್ಕೆ ಹಾಲಿ ದರ ₹75 ರಿಂದ ₹100ಕ್ಕೆ ಏರಿಕೆಯಾಗಿದ್ದು, ಪರಿಷ್ಕೃತ ದರ ಏ.1ರಿಂದಲೇ ಜಾರಿಗೆ ಬರಲಿದೆ.