ತಾಯಿ ಮತ್ತು ಮಗನ ಕಳೆ ಹೇಳುವ ಖೇಲಾ ಚಿತ್ರದ ಹಾಡು ಬಿಡುಗಡೆ ಆಗಿದೆ. ಇದು ಬಿ ಜೆ ಭರತ್ ನಿರ್ದೇಶನದ ಸಿನಿಮಾ.

 ಸಿನಿವಾರ್ತೆ

ಭರತ್‌ ವಿ.ಜೆ ನಿರ್ಮಾಣ, ನಿರ್ದೇಶನದ ‘ಖೇಲಾ’ ಚಿತ್ರದ ‘ಪುಣ್ಯಾತ್ ಗಿತ್ತೀ’ ಚಿತ್ರದ ಹಾಡು ಬಿಡುಗಡೆ ಆಗಿದೆ. ಪ್ರಮೋದ್‌ ಜೋಯಿಸ್‌ ಸಾಹಿತ್ಯ, ಎಂ ಎಸ್‌ ತ್ಯಾಗರಾಜ್‌ ಸಂಗೀತ, ವೇಲ್ ಮುರುಗನ್ ಹಾಡಿದ್ದಾರೆ. ವಿಹಾನ್‌ ಪ್ರಭಂಜನ್‌, ಆಶಿಕಾ ರಾವ್ ಜೋಡಿ. ‘ಇದೊಂದು ಪ್ರೇಮ ಕಥಾನಕವಾಗಿದ್ದರೂ, ತಾಯಿ - ಮಗನ ಬಾಂಧವ್ಯ, ಸಸ್ಪೆನ್ಸ್, ಥ್ರಿಲ್ಲರ್ ಹೀಗೆ ನೋಡುಗರಿಗೆ ಬೇಕಾದ ಎಲ್ಲಾ ಅಂಶಗಳು ನಮ್ಮ ಚಿತ್ರದಲ್ಲಿದೆ. ತಾಯಂದಿರ ದಿನದಂದು ಮೊದಲ ಹಾಡು ಬಿಡುಗಡೆಯಾಗಿತ್ತು’ ಎಂದರು ನಿರ್ದೇಶಕರು.