ಸಾರಾಂಶ
ಹೈದರಾಬಾದ್ : ಕರ್ನೂಲ್ ಬಸ್ ದುರಂತ, ಶ್ರೀಕಾಕುಳಂ ಕಾಲ್ತುಳಿತ ಮಾಸುವ ಮುನ್ನವೇ ಮತ್ತೊಂದು ಅವಘಢ ಸಂವಿಸಿದೆ. ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯಲ್ಲಿ ಜಲ್ಲಿಕಲ್ಲು ತುಂಬಿದ್ದ ಟಿಪ್ಪರ್ ಲಾರಿಯೊಂದು ಸಾರಿಗೆ ಬಸ್‌ಗೆ ಡಿಕ್ಕಿ ಹೊಡೆದ ಪರಿಣಾಮ 19 ಮಂದಿ ಸಾವನ್ನಪ್ಪಿದ್ದು, ನಾಲ್ವರು ಗಾಯಗೊಂಡಿದ್ದಾರೆ.ಹೈದರಾಬಾದ್-ಬಿಜಾಪುರ ರಾಷ್ಟ್ರೀಯ ಹೆದ್ದಾರಿಯ ಚೆವೆಲ್ಲಾ ಬಳಿ ಜಲ್ಲಿಕಲ್ಲು ತುಂಬಿಕೊಂಡು ಹೋಗುತ್ತಿದ್ದ ಟಿಪ್ಪರ್, ತಂದೂರ್‌ನಿಂದ ಹೈದರಾಬಾದ್ ಕಡೆಗೆ 72 ಪ್ರಯಾಣಿಕರನ್ನು ಕರೆದುಕೊಂಡು ಸಂಚರಿಸುತ್ತಿದ್ದ ತೆಲಂಗಾಣ ರಸ್ತೆ ಸಾರಿಗೆ ನಿಗಮದ (ಆರ್‌ಟಿಸಿ) ಬಸ್‌ಗೆ ಡಿಕ್ಕಿ ಹೊಡೆದಿದೆ. ಈ ವೇಳೆ ಜಲ್ಲಿಕಲ್ಲು ರಾಶಿಯೇ ಬಸ್ ಮೇಲೆ ಬಿದ್ದಿದ್ದು ಹಲವು ಪ್ರಯಾಣಿಕರು ಬಸ್ ಒಳಗೆ ಸಿಲುಕಿಕೊಂಡರು.
ಪರಿಣಾಮ ಬಸ್‌ನಲ್ಲಿದ್ದ 10 ಮಂದಿ ಮಹಿಳೆಯರು ಸೇರಿದಂತೆ 19 ಮಂದಿ ಅಸುನೀಗಿದ್ದಾರೆ. ನಾಲ್ವರು ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನೆಯಲ್ಲಿ ಬಸ್ ಚಾಲಕ ಕೂಡ ಮೃತಪಟ್ಟಿದ್ದಾರೆ. ಉಳಿದ ಪ್ರಯಾಣಿಕರನ್ನು ಜೆಸಿಬಿ ಮೂಲಕ ರಕ್ಷಿಸಲಾಗಿದೆ.
ರಕ್ಷಿಸಿ ಎಂದು ಆರ್ತನಾದ:
ಜಲ್ಲಿಕಲ್ಲು ತಮ್ಮ ಮೇಲೆ ಬಿದ್ದಾಗ ಪ್ರಯಾಣಿಕರು ರಕ್ಷಣೆಗೆ ಆರ್ತನಾದ ಮಾಡುತ್ತಿರುವುದು ಮಮ್ಮಲ ಮರುಗಿಸುವಂತಿತ್ತು.
ಮೋದಿ ಸಂತಾಪ- 2 ಲಕ್ಷ ರು. ಪರಿಹಾರ:
ತೆಲಂಗಾಣದಲ್ಲಿ ನಡೆದ ಭೀಕರ ಅಪಘಾತಕ್ಕೆ ಪ್ರಧಾನಿ ನರೇಂದ್ರ ಮೋದಿ ಕಂಬನಿ ಮಿಡಿದಿದ್ದು, ಮೃತರ ಕುಟುಂಬಸ್ಥರಿಗೆ ಸಂತಾಪ ಸೂಚಿಸಿದ್ದಾರೆ. ಪ್ರಧಾನ ಮಂತ್ರಿ ರಾಷ್ಟ್ರೀಯ ಪರಿಹಾರ ನಿಧಿಯಿಂದ ಮೃತರ ಕುಟುಂಬಸ್ಥರಿಗೆ 2 ಲಕ್ಷ ರು. ಗಾಯಾಳುಗಳಿಗೆ 50 ಸಾವಿರ ರು. ಪರಿಹಾರ ಘೋಷಿಸಿದ್ದಾರೆ. ಮುಖ್ಯಮಂತ್ರಿ ರೇವಂತ್ ರೆಡ್ಡಿ ಕೂಡ ಸಂತಾಪ ಸೂಚಿಸಿದ್ದಾರೆ.
)
;Resize=(128,128))
;Resize=(128,128))