ಟ್ರಂಪ್ ಅವರ ‘ಡೆಡ್ ಎಕಾನಮಿ’ ಎಂಬ ವ್ಯಂಗ್ಯದ ಬೆನ್ನಲ್ಲೇ ಅಂತಾರಾಷ್ಟ್ರೀಯ ರೇಟಿಂಗ್ ಸಂಸ್ಥೆ ಎಸ್ ಆ್ಯಂಡ್ ಪಿ ಗ್ಲೋಬಲ್ ದೇಶದ ಸಾಲದ ಮೇಲಿನ ಕ್ರೆಡಿಟ್ ರೇಟಿಂಗ್ ಅನ್ನು ‘ಬಿಬಿಬಿ-’(ಋಣಾತ್ಮಕ)ಯಿಂದ ‘ಬಿಬಿಬಿ’ಗೆ ಸ್ಥಿರ ಮುನ್ನೋಟದೊಂದಿಗೆ ಮೇಲ್ದರ್ಜೆಗೇರಿಸಿ ಶುಭ ಸುದ್ದಿ ನೀಡಿದೆ.
ಉಕ್ರೇನ್-ರಷ್ಯಾ ಸಂಘರ್ಷಕ್ಕೆ ಅಂತ್ಯ ಹಾಡಿ, ಶಾಂತಿ ಸ್ಥಾಪಿಸುವ ಉದ್ದೇಶದಿಂದ ಶನಿವಾರ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ನಡುವೆ ಅಮೆರಿಕದ ಅಲಾಸ್ಕಾದಲ್ಲಿ ದ್ವಿಪಕ್ಷೀಯ ಮಾತುಕತೆ ನಡೆಯಲಿದೆ.
ನಕಲಿ ವಿವರ/ದಾಖಲೆಗಳನ್ನು ತೋರಿಸಿ ಮತಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ ಎಂದು ರಾಹುಲ್ ಗಾಂಧಿ ಆರೋಪಿಸಿದ್ದರು. ವಿಪರ್ಯಾಸವೆಂದರೆ, 1980ರಲ್ಲಿ ಮೊದಲ ಬಾರಿ ಮತಪಟ್ಟಿಯಲ್ಲಿ ಸ್ಥಾನ ಪಡೆದಿದ್ದ ಅವರ ತಾಯಿ ಸೋನಿಯಾ ಗಾಂಧಿ ಆಗ, ಮತದಾರರೆನಿಸಿಕೊಳ್ಳಲು ಇರುವ ಕನಿಷ್ಠ ಅರ್ಹತೆಯಾದ ಪೌರತ್ವವನ್ನೇ ಪಡೆದಿರಲಿಲ್ಲ!
‘ಮತಗಳ್ಳತನ’ದ ಆರೋಪ - ಯಾವ ರೀತಿ ನಕಲಿ ಮತದಾನ ನಡೆಯತ್ತದೆಂಬ ವಿವರಣೆಯಿರುವ ಸುಮಾರು ಒಂದು ನಿಮಿಷದ ವಿಡಿಯೋವೊಂದನ್ನೂ ಕಾಂಗ್ರೆಸ್ ಪಕ್ಷ ಬಿಡುಗಡೆ ಮಾಡಿದೆ.
ಭಾರತ ಮತ್ತು ಅಮೆರಿಕ ನಡುವೆ ತೆರಿಗೆ ಸಂಘರ್ಷ ಭುಗಿಲೆದ್ದಿರುವ ನಡುವೆಯೇ ಪ್ರಧಾನಿ ನರೇಂದ್ರ ಮೋದಿ ಅವರು ಮುಂದಿನ ತಿಂಗಳು ಅಮೆರಿಕ ಪ್ರವಾಸ ಕೈಗೊಳ್ಳಲಿದ್ದಾರೆ.
ಕೌನ್ ಬನೇಗಾ ಕರೋಡ್ಪತಿ ಕಾರ್ಯಕ್ರಮದಲ್ಲಿ ಆಪರೇಷನ್ ಸಿಂದೂರದ ಪತ್ರಿಕಾಗೋಷ್ಠಿ ನೇತೃತ್ವದ ವಹಿಸಿದ್ದ ಕರ್ನಲ್ ಸೋಫಿಯಾ ಖುರೇಷಿ, ವಿಂಗ್ ಕಮಾಂಡರ್ ವ್ಯೋವಿಕಾ ಸಿಂಗ್ ಮತ್ತು ನೌಕಾ ಕಮಾಂಡರ್ ಪ್ರೇರಣಾ ಸೇನಾ ಸಮವಸ್ತ್ರದಲ್ಲಿಯೇ ಕಾಣಿಸಿಕೊಳ್ಳಲಿದ್ದಾರೆ.
ಗ್ರಾಹಕರು ಬ್ಯಾಂಕ್ಗೆ ಚೆಕ್ ಸಲ್ಲಿಸಿದ ಕೆಲವೇ ಗಂಟೆಗಳಲ್ಲಿ ಅದನ್ನು ಕ್ಲಿಯರ್ (ಖಾತೆಗೆ ಹಣ ಜಮೆ ಮಾಡುವ) ಮಾಡುವ ವ್ಯವಸ್ಥೆ ದೇಶವ್ಯಾಪಿ ಎಲ್ಲಾ ಬ್ಯಾಂಕ್ಗಳಲ್ಲಿ ಅ.4ರಿಂದ ಜಾರಿಗೆ ಬರಲಿದೆ. ಹೀಗಾಗಿ ಚೆಕ್ ಕ್ಲಿಯರೆನ್ಸ್ಗೆ 2 ದಿನಗಳವರೆಗೂ ಕಾಯಬೇಕಾದ ತೊಂದರೆಗಳಿಗೆ ಶೀಘ್ರವೇ ತೆರೆ ಬೀಳಲಿದೆ.
ಸ್ವತಃ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಸೇರಿ ಪ್ರತಿಪಕ್ಷಗಳ ಹಲವು ಮುಖಂಡರು ಗೆದ್ದಿರುವ ಕ್ಷೇತ್ರದಲ್ಲೂ ಇಂಥದ್ದೇ ಪ್ರಕರಣಗಳು ಪತ್ತೆಯಾಗಿವೆ ಎಂದು ಬಿಜೆಪಿ ತಿರುಗೇಟು ನೀಡಿದೆ.
ರಾಜಧಾನಿ ನವದೆಹಲಿಯ ಜನವಸತಿ ಪ್ರದೇಶದ ಎಲ್ಲಾ ಶ್ವಾನಗಳನ್ನು ಆರೈಕೆ ಕೇಂದ್ರಗಳಿಗೆ ಸ್ಥಳಾಂತರ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಗಳ ತುರ್ತು ವಿಚಾರಣೆಗೆ ಸುಪ್ರೀಂಕೋರ್ಟ್ ನಿರ್ಧರಿಸಿದೆ.