ಪ್ರಧಾನಿ ನರೇಂದ್ರ ಮೋದಿ ಅವರ ಕಿವಿಯಲ್ಲಿ ಓಲೆ ರೀತಿ ಕಾಣುವ ಸಾಧನದ ಫೋಟೋವೊಂದು ವೈರಲ್ ಆಗಿದ್ದು, ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ. ಇತ್ತೀಚಿನ ಒಮಾನ್ ದೇಶದ ಭೇಟಿ ವೇಳೆ ಓಲೆಯಾಕಾರದ ವಸ್ತು ಕಂಡುಬಂದಿದೆ.
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ಕಿವಿಯಲ್ಲಿ ಓಲೆ ರೀತಿ ಕಾಣುವ ಸಾಧನದ ಫೋಟೋವೊಂದು ವೈರಲ್ ಆಗಿದ್ದು, ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ. ಇತ್ತೀಚಿನ ಒಮಾನ್ ದೇಶದ ಭೇಟಿ ವೇಳೆ ಓಲೆಯಾಕಾರದ ವಸ್ತು ಕಂಡುಬಂದಿದೆ.
ಅನುವಾದಕ ಯಂತ್ರ
ಆದರೆ ವಾಸ್ತವವಾಗಿ ಇದು ನೈಜ ವೇಳೆಯ (ರಿಯಲ್ ಟೈಂ) ಸಂವಾದ ಅನುವಾದಕ ಯಂತ್ರವಾಗಿದೆ ಎಂಬುದು ಗೊತ್ತಾಗಿದೆ. ವಿದೇಶಿ ಗಣ್ಯರು ಮಾತನಾಡುವ ಭಾಷೆಯನ್ನು ಯಂತ್ರವು ನಿಜ ಸಮಯದಲ್ಲಿ ಪ್ರಧಾನಿ ಅವರ ಭಾಷೆಗೆ ಭಾಷಾಂತರ ಮಾಡಿ ಕೊಡುತ್ತದೆ. ಇದು ಸುಲಭವಾಗಿ ಸಂವಾದ ನಡೆಯುವಂತೆ ಮಾಡುತ್ತದೆ. ಈ ಯಂತ್ರವನ್ನು ಹೆಚ್ಚಿನ ವಿದೇಶಿ ಗಣ್ಯರು ಬಳಸುತ್ತಾರೆ.
ಎಕ್ಸ್‌ನಲ್ಲಿ ಮೋದಿ ಹವಾ: ಅತಿ ಹೆಚ್ಚು ಮೆಚ್ಚುಗೆ ಪಡೆದ 8 ಪೋಸ್ಟ್
ನವದೆಹಲಿ: ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಹೊಸ ದಾಖಲೆ ಬರೆದಿದ್ದಾರೆ. ಕಳೆದ 30 ದಿನದಲ್ಲಿ ಅತಿ ಹೆಚ್ಚು ಮೆಚ್ಚುಗೆ ಪಡೆದ ಅಗ್ರ 10 ಟ್ವೀಟ್‌ಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ 8 ಪೋಸ್ಟ್‌ಗಳು ಸ್ಥಾನ ಪಡೆದಿರುವುದು ವಿಶೇಷ.
ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಭಾರತ ಭೇಟಿ ನೀಡಿದಾಗ ಉಭಯ ನಾಯಕರು ಕಾರಿನಲ್ಲಿ ಒಟ್ಟಿಗೆ ತೆಗೆಸಿಕೊಂಡ ಫೋಟೋ ಮೊದಲ ಸ್ಥಾನದಲ್ಲಿದೆ. ಈ ಪೋಸ್ಟ್ ಅನ್ನು 34,000 ಜನ ಹಂಚಿಕೊಂಡಿದ್ದಾರೆ. 2.14 ಲಕ್ಷ ಮಂದಿ ಮೆಚ್ಚಿದ್ದಾರೆ.
ಉಳಿದಂತೆ ಮೋದಿ ಪುಟಿನ್‌ಗೆ ರಷ್ಯಾ ಭಾಷೆಗೆ ತುರ್ಜುಮೆಗೊಂಡಿರುವ ಭಗವದ್ಗೀತೆಯನ್ನು ಬಹುಮಾನವಾಗಿ ನೀಡಿರುವ ಫೋಟೋ, ಆಸ್ಟ್ರೇಲಿಯಾ ಪ್ರಧಾನಿ ಆಂಥೋನಿ ಅಲ್ಬನೀಸ್ 2ನೇ ಮದುವೆಗೆ ಶುಭ ಕೋರಿರುವ ಫೋಸ್ಟ್‌ಗಳೂ ಸೇರಿವೆ.
ಈ 8 ಪೋಸ್ಟ್‌ಗಳು ಒಟ್ಟಾರೆ 14.76 ಲಕ್ಷ ಮೆಚ್ಚುಗೆ ಗಳಿಸಿದ್ದು, 1,60,700 ಮಂದಿ ರಿಪೋಸ್ಟ್ ಮಾಡಿದ್ದಾರೆ. ಮತ್ತೊಂದು ವಿಶೇಷವೆಂದರೆ ಈ ಪಟ್ಟಿಯಲ್ಲಿ ಬೇರೆ ಯಾವುದೇ ರಾಜಕಾರಣಿಯ ಪೋಸ್ಟ್‌ಗಳು ಸ್ಥಾನ ಪಡೆದಿಲ್ಲ.