ಸಾರಾಂಶ
ರಾಷ್ಟ್ರೀಯ ಸ್ವಯಂ ಸೇವಕ ಸಂಘಕ್ಕೆ 100 ವರ್ಷ ತುಂಬಿದ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಬುಧವಾರ ಭಾರತ ಮಾತೆಯ ಚಿತ್ರವಿರುವ ₹ 100 ನಾಣ್ಯ ಮತ್ತು ವಿಶೇಷ ಅಂಚೆ ಚೀಟಿ ಬಿಡುಗಡೆ ಮಾಡಿದರು.
ನವದೆಹಲಿ: ರಾಷ್ಟ್ರೀಯ ಸ್ವಯಂಸೇವಕ ಸಂಘಕ್ಕೆ 100 ವರ್ಷ ತುಂಬಿದ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಬುಧವಾರ ಭಾರತ ಮಾತೆಯ ಚಿತ್ರವಿರುವ ₹ 100 ನಾಣ್ಯ ಮತ್ತು ವಿಶೇಷ ಅಂಚೆ ಚೀಟಿ ಬಿಡುಗಡೆ ಮಾಡಿದರು.
ನಾಣ್ಯದ ಒಂದು ಬದಿಯಲ್ಲಿ ರಾಷ್ಟ್ರೀಯ ಲಾಂಛನ ಮತ್ತು ಇನ್ನೊಂದು ಬದಿಯಲ್ಲಿ ಸಿಂಹದೊಂದಿಗೆ ವರದ ಮುದ್ರೆಯಲ್ಲಿ ಭಾರತ ಮಾತ್ರೆ ಭವ್ಯ ಚಿತ್ರವನ್ನು ಚಿತ್ರಿಸಲಾಗಿದೆ. ಅದರ ಜತೆಗೆ ಸ್ವಯಂಸೇವಕರು ಭಕ್ತಿಯಿಂದ ಭಾರತ ಮಾತೆಗೆ ನಮಸ್ಕರಿಸುತ್ತಿರುವುದು ನೋಡಬಹುದು. ಇದರ ಜತೆಗೆ ಆರ್‌ಎಸ್‌ಎಸ್‌ನ ಧ್ಯೇಯ ವಾಕ್ಯವನ್ನು ಮುದ್ರಿಸಲಾಗಿದ.ಇದೇ ವೇಳೆ ವಿಶೇಷ ಅಂಚೆಚೀಟಿಯನ್ನೂ ಬಿಡುಗಡೆಗೊಳಿಸಲಾಯಿತು. ಅದರಲ್ಲಿ 1963ರ ಗಣರಾಜ್ಯೋತ್ಸವದ ಮೆರವಣಿಗೆಯಲ್ಲಿ ಆರ್‌ಎಸ್‌ಎಸ್ ಸ್ವಯಂಸೇವಕರು ಭಾಗವಹಿಸಿದ್ದನ್ನು ಚಿತ್ರಿಸಲಾಗಿದೆ.