ಪಟಾಕಿ ಸಿಡಿತದಿಂದ ಮಕ್ಕಳು ಸೇರಿದಂತೆ 2ಂ ಮಂದಿಗೆ ಗಾಯ

| Published : Oct 22 2025, 01:03 AM IST

ಪಟಾಕಿ ಸಿಡಿತದಿಂದ ಮಕ್ಕಳು ಸೇರಿದಂತೆ 2ಂ ಮಂದಿಗೆ ಗಾಯ
Share this Article
  • FB
  • TW
  • Linkdin
  • Email

ಸಾರಾಂಶ

ನೇತ್ರ ತಜ್ಞ ಡಾ. ಹೆಚ್.ಆರ್.ಮಂಜುನಾಥ್ ಅವರು ಹೇಳುವಂತೆ, ಪಟಾಕಿ ಸಿಡಿಸುವುದನ್ನೇ ಬಿಟ್ಟರೆ ಒಳಿತು, ಪರಿಸರ ಮಾತ್ರವಲ್ಲ ಕಣ್ಣಿನ ರಕ್ಷಣೆಗೂ ಸಹಕಾರಿ. ಇಷ್ಟಕ್ಕೂ ಪಟಾಕಿ ಸಿಡಿಸಲೇ ಬೇಕಾದಲ್ಲಿ ಪೋಷಕರು ಎಚ್ಚರಿಕೆಯಿಂದ ಮಕ್ಕಳಿಂದ ಪಟಾಕಿ ಹೊಡೆಸಬೇಕು, ಈ ಬಗ್ಗೆ ಜನರಲ್ಲಿ ಜಾಗೃತಿ ಮೂಡಿರುವುದೇ ಅನಾಹುತಗಳು ಕಡಿಮೆಯಾಗಲು ಕಾರಣ.

ಕನ್ನಡಪ್ರಭ ವಾರ್ತೆ ಕೋಲಾರಬೆಳಕಿನ ಹಬ್ಬವಾದ ದೀಪಾವಳಿಯಂದು ಪಟಾಕಿ ಸಿಡಿಸುವಾಗ ತಾಲ್ಲೂಕಿನ ವಿವಿಧೆಡೆ ೨೦ ಕ್ಕೂ ಹೆಚ್ಚು ಮಂದಿ ಮಕ್ಕಳು, ಹಿರಿಯರು ಗಾಯಗೊಂಡಿದ್ದು ವಿವಿಧ ಆಸ್ಪತ್ರೆಗಳಿಗೆ ಧಾವಿಸಿ ಚಿಕಿತ್ಸೆ ಪಡೆದರು. ಕಣ್ಣಿಗೆ ಸಣ್ಣಪುಟ್ಟ ಗಾಯ

ಪರಿಸರ ಕಾಳಜಿಯಿಂದ ಅನೇಕರು ಪಟಾಕಿ ಸಿಡಿಸಿದ ಪ್ರಮಾಣ ಕಡಿಮೆಯಾಗಿದೆ ಮತ್ತು ಸಿಡಿಸುವಾಗ ಜಾಗೃತಿ ವಹಿಸಬೇಕೆಂಬ ಅರಿವು ಜನರಲ್ಲಿ ಬಂದಿರುವ ಕಾರಣ ಈ ಬಾರಿ ದೃಷ್ಟಿದೋಷದಂತಹ ಯಾವುದೇ ಗಂಭೀರ ಪ್ರಕರಣಗಳು ವರದಿಯಾಗಿಲ್ಲ, ಆಸ್ಪತ್ರೆಗೆ ಬಂದವರಲ್ಲಿ ಓರ್ವ ಯುವಕ ಸೇರಿದಂತೆ ಉಳಿದ ೧೨ ವರ್ಷಕ್ಕಿಂತ ಕಡಿಮೆ ವಯಸ್ಸಿನ ೧೦ ಮಕ್ಕಳು ಇದ್ದಾರೆ ಎಂದರು.ಹಿಂದಿನ ವರ್ಷಗಳಿಗಿಂತ ಈ ಬಾರಿ ಪಟಾಕಿ ಸಿಡಿತದಿಂದಾಗಿ ಚಿಕಿತ್ಸೆಗೆ ಬಂದವರ ಸಂಖ್ಯೆ ಬಹಳಷ್ಟು ಕುಸಿತವಾಗಿದ್ದು, ಜನರಲ್ಲಿ ಜಾಗೃತಿ ಮೂಡಿರುವುದು ಮತ್ತು ಪರಿಸರ ಕಾಳಜಿಯಿಂದ ಹಸಿರು ಪಟಾಕಿ ಮಾತ್ರ ಸಿಡಿಸಲು ಮುಂದಾಗಿರುವುದೇ ಇದಕ್ಕೆ ಕಾರಣ ಎನ್ನಲಾದಿಜೆ..

ನೇತ್ರ ತಜ್ಞ ಡಾ. ಹೆಚ್.ಆರ್.ಮಂಜುನಾಥ್ ಅವರು ಹೇಳುವಂತೆ, ಪಟಾಕಿ ಸಿಡಿಸುವುದನ್ನೇ ಬಿಟ್ಟರೆ ಒಳಿತು, ಪರಿಸರ ಮಾತ್ರವಲ್ಲ ಕಣ್ಣಿನ ರಕ್ಷಣೆಗೂ ಸಹಕಾರಿ. ಇಷ್ಟಕ್ಕೂ ಪಟಾಕಿ ಸಿಡಿಸಲೇ ಬೇಕಾದಲ್ಲಿ ಪೋಷಕರು ಎಚ್ಚರಿಕೆಯಿಂದ ಮಕ್ಕಳಿಂದ ಪಟಾಕಿ ಹೊಡೆಸಬೇಕು, ಈ ಬಗ್ಗೆ ಜನರಲ್ಲಿ ಜಾಗೃತಿ ಮೂಡಿರುವುದೇ ಅನಾಹುತಗಳು ಕಡಿಮೆಯಾಗಲು ಕಾರಣ ಎಂದರು. ಆಯುರ್ವೇದ ಚಿಕಿತ್ಸೆ

ನಗರದ ಹಳೆ ಮಾಧ್ಯಮಿಕ ಶಾಲೆ ಎದುರಿಗಿರುವ ವೆಂಕಟೇಶಯ್ಯಶೆಟ್ಟಿ ಸುಟ್ಟಗಾಯಗಳ ಚಿಕಿತ್ಸಾಯಲಯಕ್ಕೆ ಈ ಬಾರಿ ಕೇವಲ ಇಬ್ಬರು ಸುಟ್ಟಗಾಯಗಳಿಂದ ಚಿಕಿತ್ಸೆಗೆ ಆಗಮಿಸಿದ್ದು, ಜಾಗೃತಿಯ ಕಾರರಣ ಈ ಬಾರಿ ಅನಾಹುತ ಕಡಿಮೆಯಾಗಿದೆ ಎಂದು ಪಾರಂಪರಿಕ ವೈದ್ಯ ವಿ.ಮಂಜುನಾಥ್ ಹರ್ಷ ವ್ಯಕ್ತಪಡಿಸಿದರು.ಉಳಿದಂತೆ ವಾಸನ್ ಐಕೇರ್‌ನಲ್ಲಿ ಒಬ್ಬರು ಮಾತ್ರ ಪಟಾಕಿಯಿಂದಾದ ಹಾನಿಗೆ ಚಿಕಿತ್ಸೆ ಪಡೆದಿದ್ದು, ಉಳಿದಂತೆ ನಗರರ ಶಂಕರ್ ಕಣ್ಣಿನ ಆಸ್ಪತ್ರೆ, ಜಾಲಪ್ಪ ಆಸ್ಪತ್ರೆ, ಜಿಇಎಫ್ ರೋಟರಿ ಕಣ್ಣಾಸ್ಪತ್ರೆ ಮತ್ತಿತರರೆಡೆ ಪಟಾಕಿ ಅನಾಹುತದಿಂದ ಚಿಕಿತ್ಸೆಗೆ ಯಾರೂ ಬಾರದಿರುವುದು ಒಳ್ಳೆಯ ಬೆಳವಣಿಗೆಯಾಗಿದೆ. ಜನರಲ್ಲಿ ಪಟಾಕಿ ಕುರಿತು ಅರಿವು ಹೆಚ್ಚಿದೆ ಎಂಬುದಕ್ಕೆ ನಿದರ್ಶನವಾಗಿದೆ.