ಆತ್ಮಹತ್ಯೆ ಮಾಡಿದ ಕೃಷಿಕನ ಕುಟುಂಬಕ್ಕೆ 5 ಲಕ್ಷ ರು. ಪರಿಹಾರ ಘೋಷಣೆ

| Published : Jul 07 2024, 01:27 AM IST

ಆತ್ಮಹತ್ಯೆ ಮಾಡಿದ ಕೃಷಿಕನ ಕುಟುಂಬಕ್ಕೆ 5 ಲಕ್ಷ ರು. ಪರಿಹಾರ ಘೋಷಣೆ
Share this Article
  • FB
  • TW
  • Linkdin
  • Email

ಸಾರಾಂಶ

ರ್ಕಾರದಿಂದ 5 ಲಕ್ಷ ರು. ಪರಿಹಾರ ಕೊಡಿಸುವುದಾಗಿ ಹೇಳಿದರಲ್ಲದೇ, ಮನೆ ದುರಸ್ತಿಯನ್ನು ಸರ್ಕಾರದ ವತಿಯಿಂದ ಮಾಡಿಸುವುದಾಗಿ ಹೇಳಿ ಮನೆಯವರಿಗೆ ಧೈರ್ಯ ತುಂಬಿದರು.

ಕನ್ನಡಪ್ರಭ ವಾರ್ತೆ ಸುಳ್ಯ ಅಡಕೆ ಕೃಷಿಗೆ ಎಲೆ ಹಳದಿ ರೋಗ ಬಾಧಿಸಿದ ಪರಿಣಾಮ ಕೃಷಿ‌ ನಾಶಗೊಂಡಿದ್ದು ಮನನೊಂದ ಕೃಷಿಕ ಮಡಪ್ಪಾಡಿ ಬಲ್ಕಜೆ ಸೀತಾರಾಮ ಎಂಬವರು 4 ದಿನದ ಹಿಂದೆ ಆತ್ಮಹತ್ಯೆ ಮಾಡಿಕೊಂಡಿದ್ದು, ಅವರ ಮನೆಗೆ ಸಚಿವ ದಿನೇಶ್ ಗುಂಡೂರಾವ್ ಮತ್ತು ಮಾಜಿ ಎಂ.ಎಲ್.ಸಿ. ಹಾಗೂ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್ ಶನಿವಾರ ಭೇಟಿ ನೀಡಿ ಮನೆಯವರಿಗೆ ಸಾಂತ್ವನ ಹೇಳಿದರು. ಇದೇ ಸಂದರ್ಭದಲ್ಲಿ ಸರ್ಕಾರದಿಂದ 5 ಲಕ್ಷ ರು. ಪರಿಹಾರ ಕೊಡಿಸುವುದಾಗಿ ಹೇಳಿದರಲ್ಲದೇ, ಮನೆ ದುರಸ್ತಿಯನ್ನು ಸರ್ಕಾರದ ವತಿಯಿಂದ ಮಾಡಿಸುವುದಾಗಿ ಹೇಳಿ ಮನೆಯವರಿಗೆ ಧೈರ್ಯ ತುಂಬಿದರು.

ವಿಧಾನ ಪರಿಷತ್ ಮಾಜಿ ಸದಸ್ಯ ಹರೀಶ್ ಕುಮಾರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ.ಸಿ. ಜಯರಾಮ, ತಹಸೀಲ್ದಾರ್ ಮಂಜುನಾಥ್, ತಾ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಜಣ್ಣ, ಕುಕ್ಕೆಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷ ನಿತ್ಯಾನಂದ ಮುಂಡೋಡಿ, ಮಡಪ್ಪಾಡಿ ಗ್ರಾ.ಪಂ. ಅಧ್ಯಕ್ಷೆ ಉಷಾ ಜಯರಾಮ, ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಗುರುಪ್ರಸಾದ್, ತೋಟಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕಿ ಸುಹಾನ, ಪಿಡಿಒ ರವಿಚಂದ್ರ, ಮಡಪ್ಪಾಡಿ ಸೊಸೈಟಿ ಉಪಾಧ್ಯಕ್ಷ ಮಿತ್ರದೇವ ಮಡಪ್ಪಾಡಿ, ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪಿ.ಎಸ್. ಗಂಗಾಧರ, ಕೆಪಿಸಿಸಿ ಮಾಜಿ ಸದಸ್ಯ ವೆಂಕಪ್ಪ ಗೌಡ, ಮಡಪ್ಪಾಡಿ ಸೊಸೈಟಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಶಾಂತ್ ಪೂಂಬಾಡಿ ಮತ್ತಿತರರಿದ್ದರು.