ಸಾರಾಂಶ
5000 ಸಂಚಿಕೆಯೊಂದಿಗೆ ಗಿನ್ನಿಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ಸೇರುತ್ತಿರುವ ಥಟ್ ಅಂತ ಹೇಳಿ ಕಾರ್ಯಕ್ರಮಕ್ಕೆ ಸಚಿವ ಈಶ್ವರ ಬಿ.ಖಂಡ್ರೆ ಚಾಲನೆ ನೀಡಿದರು.
ಬೆಂಗಳೂರು : ಮಾಹಿತಿ ಮತ್ತು ಮನರಂಜನೆ ನೀಡುವ ‘ಥಟ್ ಅಂತ ಹೇಳಿ’ ನಿರಂತರ 23 ವರ್ಷಗಳಿಂದ ವೀಕ್ಷಕರ ಜ್ಞಾನದಾಹ ತಣಿಸುತ್ತಿರುವುದು ಕಾರ್ಯಕ್ರಮದ ಗಾಂಭೀರ್ಯತೆ ತೋರುತ್ತದೆ ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ್ ಖಂಡ್ರೆ ಹೇಳಿದರು.
ಶನಿವಾರ ಬೆಂಗಳೂರಿನ ಜಿಕೆವಿಕೆಯ ಸಭಾಂಗಣದಲ್ಲಿ ಥಟ್ ಅಂತ ಹೇಳಿ ಕ್ವಿಜ್ ಕಾರ್ಯಕ್ರಮ 5000 ಸಂಚಿಕೆಯೊಂದಿಗೆ ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ಸೇರುತ್ತಿರುವ ಸಂದರ್ಭಕ್ಕೆ ಸಾಕ್ಷಿಯಾಗಿ ಮಾತನಾಡಿದರು.
ಬೆಂಗಳೂರು ದೂರದರ್ಶನ ಕೇಂದ್ರದಿಂದ ಪ್ರಸಾರವಾಗುವ ಈ ಕಾರ್ಯಕ್ರಮ 1980ರ ದಶಕದಿಂದಲೂ ತನ್ನ ಗಾಂಭೀರ್ಯತೆ, ವೃತ್ತಿ ನಿಷ್ಠೆ ಉಳಿಸಿಕೊಂಡಿದೆ. ವಿಚಾರಪೂರ್ಣ ಮಾಹಿತಿ, ಆರೋಗ್ಯಕರ ಮನರಂಜನೆಯನ್ನು ಉಚಿತವಾಗಿ ಸಮಸ್ತ ಜನತೆಗೆ ನೀಡುತ್ತಿದೆ. ಹಲವು ಪ್ರತಿಭೆಗಳ ಅನಾವರಣಕ್ಕೆ ಅನುವು ಮಾಡಿಕೊಟ್ಟಿದೆ ಎಂದರು.
ನಾಡೋಜ ಹಂ.ಪ.ನಾಗರಾಜಯ್ಯ, ಶಿಕ್ಷಣ ತಜ್ಞ ನಾಡೋಜ ವೊಡೇ ಪಿ.ಕೃಷ್ಣ, ಕಲಬುರಗಿ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಶಶಿಕಾಂತ್ ಉಡಿಕೇರಿ, ವಿದುಷಿ ರೇವತಿ ಕಾಮತ್ ಇದ್ದರು.