ವಿಕಸಿತ ಭಾರತ ನಮ್ಮೆಲ್ಲರ ಗುರಿಯಾಗಬೇಕು

| Published : Aug 17 2024, 12:51 AM IST

ವಿಕಸಿತ ಭಾರತ ನಮ್ಮೆಲ್ಲರ ಗುರಿಯಾಗಬೇಕು
Share this Article
  • FB
  • TW
  • Linkdin
  • Email

ಸಾರಾಂಶ

ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ ೨೦೪೭ರಲ್ಲಿ ಭಾರತವನ್ನು ವಿಕಸಿತ ಭಾರತವನ್ನಾಗಿಸುವುದು ನಮ್ಮೆಲ್ಲರ ಗುರಿಯಾಗಬೇಕು. ಈ ನಿಟ್ಟಿನಲ್ಲಿ ಪ್ರತಿಯೊಬ್ಬರು ದೇಶಾಭಿಮಾನವನ್ನು ಬೆಳೆಸಿಕೊಂಡು ದೇಶಕ್ಕಾಗಿ ಸೇವೆ ಸಲ್ಲಿಸಬೇಕು ಎಂದು ಶಾಸಕ ಸಿದ್ದು ಸವದಿ ತಿಳಿಸಿದರು. ಪಟ್ಟಣದ ಎಸ್ಆರ್‌ಎ ಮೈದಾನದಲ್ಲಿ ತಾಲ್ಲೂಕು ಆಡಳಿತದಿಂದ ಹಮ್ಮಿಕೊಳ್ಳಲಾಗಿದ್ದ ೭೮ ನೇ ಸ್ವಾತಂತ್ರ್ಯೋತ್ಸವ ದಿನಾಚರಣೆಯ ಕಾರ್ಯಕ್ರಮದಲ್ಲಿ ಮಾತನಾಡಿದರು. ವಿಶ್ವದಲ್ಲಿಯೇ ಅಹಿಂಸಾ ತತ್ವದ ಮೇಲೆ ಸ್ವಾತಂತ್ರ‍್ಯ ಪಡೆದ ದೇಶ ಭಾರತವಾಗಿದೆ.

ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ

೨೦೪೭ರಲ್ಲಿ ಭಾರತವನ್ನು ವಿಕಸಿತ ಭಾರತವನ್ನಾಗಿಸುವುದು ನಮ್ಮೆಲ್ಲರ ಗುರಿಯಾಗಬೇಕು. ಈ ನಿಟ್ಟಿನಲ್ಲಿ ಪ್ರತಿಯೊಬ್ಬರು ದೇಶಾಭಿಮಾನವನ್ನು ಬೆಳೆಸಿಕೊಂಡು ದೇಶಕ್ಕಾಗಿ ಸೇವೆ ಸಲ್ಲಿಸಬೇಕು ಎಂದು ಶಾಸಕ ಸಿದ್ದು ಸವದಿ ತಿಳಿಸಿದರು.

ಪಟ್ಟಣದ ಎಸ್ಆರ್‌ಎ ಮೈದಾನದಲ್ಲಿ ತಾಲ್ಲೂಕು ಆಡಳಿತದಿಂದ ಹಮ್ಮಿಕೊಳ್ಳಲಾಗಿದ್ದ ೭೮ ನೇ ಸ್ವಾತಂತ್ರ್ಯೋತ್ಸವ ದಿನಾಚರಣೆಯ ಕಾರ್ಯಕ್ರಮದಲ್ಲಿ ಮಾತನಾಡಿದರು. ವಿಶ್ವದಲ್ಲಿಯೇ ಅಹಿಂಸಾ ತತ್ವದ ಮೇಲೆ ಸ್ವಾತಂತ್ರ‍್ಯ ಪಡೆದ ದೇಶ ಭಾರತವಾಗಿದೆ. ನಮ್ಮ ದೇಶದ ಸ್ವಾತಂತ್ರ‍್ಯ ಹೋರಾಟದ ಇತಿಹಾಸವನ್ಜು ಮತ್ತು ಸ್ವಾತಂತ್ರ‍್ಯದ ಮಹತ್ವವನ್ನು ನಮ್ಮ ಮುಂದಿನ ಜನಾಂಗಕ್ಕೆ ತಿಳಿಸುವುದು ಮಹತ್ವದ್ದಾಗಿದೆ. ಉಗ್ರಗಾಮಿಗಳನ್ನು ಬೆಂಬಲಿಸಿ ದೇಶದ್ರೋಹ ಚಟುವಟಿಕೆಗಳಲ್ಲಿ ತೊಡಗಿಕೊಂಡವರನ್ನು ದೇಶ ಬಿಟ್ಟು ಓಡಿಸಬೇಕು ಎಂದು ಶಾಸಕ ಸವದಿ ಹೇಳಿದರು.ತಹಶೀಲ್ದಾರ್ ಗಿರೀಶ ಸ್ವಾದಿ ಮಾತನಾಡಿ, ದೇಶದ ಸ್ವಾತಂತ್ರ‍್ಯಕ್ಕಾಗಿ ಅನೇಕರು ತಮ್ಮ ಪ್ರಾಣವನ್ನು ಬಲಿದಾನ ಮಾಡಿದ್ದಾರೆ. ದೇಶದ ಸ್ವಾತಂತ್ರ‍್ಯಕ್ಕಾಗಿ ಹೋರಾಡಿದ ಮಹಾನುಭಾವರನ್ನು ಸ್ಮರಿಸುವುದು ಕೂಡಾ ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ತಿಳಿಸಿದರು. ಈ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ವ್ಯಕ್ತಿಗಳನ್ನು ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.

ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಾಹಕ ಅಧಿಕಾರಿ ಸಿದ್ದಪ್ಪ ಪಟ್ಟಿಹಾಳ, ಪೌರಾಯುಕ್ತ ಜಗದೀಶ ಈಟಿ, ಸಿಪಿಐ ಸಂಜೀವ ಬಳಗಾರ, ಉಪತಹಸೀಲ್ದಾರ್‌ ಎಸ್.ಎಲ್. ಕಾಗಿಯವರ, ಪಿಎಸ್‌ಐ ಶಾಂತಾ ಹಳ್ಳಿ, ರಮೇಶ ಅವಟಿ, ಬಸವರಾಜ ಹನಗಂಡಿ, ಅರ್ಜುನ ಕಾಖಂಡಕಿ, ನಗರಭೆಯ ಸದಸ್ಯರಾದ ಸಂಜಯ ತೆಗ್ಗಿ, ಯುನುಸ್ ಚೌಗಲಾ, ವಿದ್ಯಾ ದಬಾಡಿ, ಪ್ರಭಾಕರ ಮುಳೆದ, ಯಲ್ಲಪ್ಪ ಕಟಗಿ, ಬಿ.ಜೆ.ಜೋರಾಪುರ, ಎಸ್.ಎಲ್.ಕಾಗಿಯವರ, ಪ್ರಶಾಂತ ಹೊಸಮನಿ, ಗೌರಿಹರ ಮುತ್ತೂರ, ಸೋಮಶೇಖರ ಕೊಟ್ರಶೆಟ್ಟಿ, ಮಲ್ಲಿಕಾರ್ಜುನ ಗಡೆನ್ನವರ, ಪ್ರಕಾಶ ಮಠಪತಿ, ಸದಾಶಿವ ಕುಂಬಾರ ಸೇರಿದಂತೆ ಅನೇಕರು ಇದ್ದರು.