ಸಾರಾಂಶ
ಕನ್ನಡಪ್ರಭ ವಾರ್ತೆ ಸಿಂದಗಿ
ಪುರಾತನ ಕಾಲದಲ್ಲಿ ಋಷಿ ಮುನಿಗಳ ದೀರ್ಘಕಾಲದ ಆರೋಗ್ಯ ಬದುಕಿನ ಗುಟ್ಟೆಂದರೆ ಅದು ಯೋಗ ಸಾಧನೆ ಎಂದು ಸಾರಂಗಮಠದ ಡಾ.ಪ್ರಭುಸಾರಂಗದೇವ ಶಿವಾಚಾರ್ಯರು ನುಡಿದರು.ಪಟ್ಟಣದ ಎಚ್.ಜಿ.ಕಾಲೇಜಿನ ಆವರಣದಲ್ಲಿ ಯೋಗೋತ್ಸವ ಸಮಿತಿ ವತಯಿಂದ ನಿರಂತರ ೨೧ದಿನಗಳ ಕಾಲ ಹಮ್ಮಿಕೊಂಡಿರುವ ಯೋಗ, ಧ್ಯಾನ ಶಿಬಿರದ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿ ಅವರು, ಪ್ರಸ್ತುತ ದಿನಗಳಲ್ಲಿ ಯುವ ಜನತೆ ದೈಹಿಕ ಚಟುವಟಿಕೆಗಳಿಗೆ ಪೂರಕವಾದ ಆಟ ಪಾಠಗಳಿಲ್ಲದ ಆಲಸ್ಯಮಯ ಜೀವನಶೈಲಿ ಹಾಗೂ ಅಹಿತಕರ, ಇತಿಮಿತಿ ಇಲ್ಲದ ಆಹಾರ ಶೈಲಿಯೂ ಆರೋಗ್ಯಕ್ಕೆ ಮಾರಕವಾಗುತ್ತಿದೆ. ಇದನ್ನು ತಪ್ಪಿಸಲು ದಿನನಿತ್ಯ ಯೋಗ ಸಾಧನೆ ಮಾಡಬೇಕು. ಶಾಸಕ ಮನಗೂಳಿ ಹಾಗೂ ಯೋಗೋತ್ಸವ ಸಮಿತಿಯ ಸಂಗಡಿಗರು ಹಮ್ಮಿಕೊಂಡಿರುವ ಈ ಕಾರ್ಯ ಶ್ಲಾಘನೀಯ ಎಂದರು.ಶಾಸಕ ಅಶೋಕ ಮನಗೂಳಿ ಮಾತನಾಡಿ, ಆಧುನಿಕ ಒತ್ತಡದ ಜೀವನದಲ್ಲಿ ನಮಗರಿಯದಂತೆ ಸಾಕಷ್ಟು ದೈಹಿಕ ಮತ್ತು ಮಾನಸಿಕ ಕಾಯಿಲೆಗಳಿಗೆ ನಾವು ತುತ್ತಾಗುತ್ತಿದ್ದೇವೆ. ಇವುಗಳಿಂದ ದೂರವಿರುವ ಇರಬೇಕಾದರೇ ನಾವು ಪ್ರತಿನಿತ್ಯ ದೈಹಿಕ ಮತ್ತು ಮಾನಸಿಕ ಆರೋಗ್ಯ ವೃದ್ಧಿಗೆ ಮತ್ತು ಧ್ಯಾನದಂತಹ ಸಾಧನೆಗಳನ್ನು ನಿತ್ಯ ಬದುಕಿನಲ್ಲಿ ಅಳವಡಿಸಿಕೊಂಡು ಆರೋಗ್ಯವಂತರಾಗಿರಬೇಕು. ೨೧ ದಿನಗಳ ಕಾಲ ನಡೆಯುವ ಧ್ಯಾನ ಯೋಗ ಮತ್ತು ಪ್ರವಚನ ಶಿಬಿರದ ಸದುಪಯೋಗವನ್ನು ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.ಯೋಗ ಹಾಗೂ ಪ್ರವಚನಗಳನ್ನು ನಡೆಸಿಕೊಡುತ್ತಿರುವ ಹಿಮಾಲಯದ ಯೋಗ ಸಾಧಕ ಯೋಗ ಗುರು ನಿರಂಜನ ಶ್ರೀಗಳು ಮಾತನಾಡಿ, ಮೊಸಳೆ ಹಾವುಗಳಂತಹ ಪ್ರಾಣಿಗಳು ಶತಾಯುಷಿಗಳು. ದೀರ್ಘಾಯುಷ್ಯದ ಗುಟ್ಟೆಂದರೇ ದೀರ್ಘ ಶ್ವಾಸ. ಮನುಷ್ಯ ನಿಮಿಷಕ್ಕೆ ೭೨ ಬಾರಿ ಉಸಿರಾಡಿದರೇ ಈ ಪ್ರಾಣಿಗಳು ನಿಮಿಷಕ್ಕೆ ನಾಲ್ಕಾರು ಬಾರಿ ಮಾತ್ರ ಉಸಿರಾಡುತ್ತವೆ. ಒಟ್ಟಾರೆ ದೀರ್ಘ ಶ್ವಾಸ ಆರೋಗ್ಯ ಮತ್ತು ಆಯುಷ್ಯವನ್ನು ವೃದ್ಧಿಸುತ್ತವೆ ಎಂದು ಕಿವಿಮಾತು ಹೇಳಿದರು.ಯೋಗಾದಲ್ಲಿ ರಾಂಪುರ ಪಿ.ಎ ಆರೂಢಮಠದ ನಿತ್ಯಾನಂದ ಮಹಾಸ್ವಾಮಿಗಳು ಸಮಿತಿಯ ಗೌರವಾಧ್ಯಕ್ಷ ಮಹಾಂತೇಶ ಪಟ್ಟಣಶೆಟ್ಟಿ, ಡಾ.ಅರವಿಂದ ಮನಗೂಳಿ, ಅಶೋಕ ಅಲ್ಲಾಪುರ, ಶ್ರೀಶೈಲಗೌಡ ಬಿರಾದಾರ ಮಾಗಣಗೇರಿ, ಮಲ್ಲಿಕಾರ್ಜುನ್ ಹಂಗರಗಿ, ಆನಂದ ಶಾಬಾದಿ, ಮಲ್ಲಿಕಾರ್ಜುನ ಅಲ್ಲಾಪುರ್, ಡಾ.ಶ್ರೀಶೈಲ್ ಪಾಟೀಲ, ಡಾ.ಮಹಾಂತೇಶ ಹಿರೇಮಠ, ಶಿವಾನಂದ ಕಲಬುರ್ಗಿ, ಎಂ.ಆರ್.ಹೆಗ್ಗಣದೊಡ್ಡಿ, ಸುರೇಶ್ ಪೂಜಾರಿ, ಸಂಗನಬಸವ ಬಿರಾದಾರ, ಅಂಬರೀಶ್ ಬಿರಾದರ್, ಸಾಯಬಣ್ಣ ಪುರದಾಳ, ರಾಜು ನರಗೋದಿ, ಮುತ್ತು ಪಟ್ಟಣಶೆಟ್ಟಿ, ಮಹಾನಂದ ಬಮ್ಮಣ್ಣಿ, ಶೈಲಶ್ರೀ ಪಟ್ಟಣಶೆಟ್ಟಿ, ಶೋಭಾ ಚಿಗರಿ ಡಾ.ಸಿಮಾ ವಾರದ ಸೇರಿದಂತೆ ಹಲವರಿದ್ದರು. ದೈಹಿಕ ನಿರ್ದೇಶಕ ರವಿ ಗೋಲಾ, ಉಪನ್ಯಾಸಕ ಸಿದ್ದಲಿಂಗ ಕಿಣಗಿ ಕಾರ್ಯಕ್ರಮ ನಿರೂಪಿಸಿದರು.