ಸಾರಾಂಶ
ಆಲೂರು ಪಟ್ಟಣದ ಯಡೂರು ಕ್ರಾಸ್ ರಸ್ತೆ ಬಳಿ ಇರುವ ಎಫ್.ಎಂ ಚಿಕನ್ ಸೆಂಟರ್ ಆವರಣದಲ್ಲಿ ಯುವಕರ ಬಳಗದ ಚೇತನ್ ಹಾಗೂ ನವಾಜ್ ಅವರ ನೇತೃತ್ವದಲ್ಲಿ ಆಯೋಜಿಸಿದ್ದ 78ನೇ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ನಿವೃತ್ತ ಶಿಕ್ಷಕ ಎಟಿ ಮಲ್ಲೇಶ್ ಮಾತನಾಡಿದರು. ಭಾರತ ದೇಶ ಅನೇಕ ಭಾಷೆ, ಧರ್ಮ ಅನೇಕ ಜಾತಿಗಳಿಂದ ಕೂಡಿದ ಪ್ರಜಾಪ್ರಭುತ್ವ ರಾಷ್ಟ್ರವಾಗಿದೆ. ದೇಶದಲ್ಲಿ ಕೋಮುವಾದ, ಭ್ರಷ್ಟಾಚಾರ, ಜಾತಿ ಸೇರಿದಂತೆ ಅನಿಷ್ಟ ಪದ್ಧತಿ ನಿರ್ಮೂಲನೆಗಾಗಿ ಶ್ರಮಿಸಬೇಕಾಗಿದೆ. ಮಕ್ಕಳಿಗೆ ದೇಶಾಭಿಮಾನ ಬೆಳೆಸಲು ರಾಷ್ಟ್ರನಾಯಕರ, ಮಹಾನ್ ಪುರುಷರ , ಶರಣರ, ದಾರ್ಶನಿಕರ ಜೀವನ ಆಧಾರಿತ ವಿಷಯ ಹೇಳಬೇಕು ಎಂದು ಹೇಳಿದರು.
ಕನ್ನಡಪ್ರಭ ವಾರ್ತೆ ಆಲೂರು
ಹಿರಿಯರ ಹೋರಾಟ, ತ್ಯಾಗದ ಫಲವಾಗಿ ದೇಶಕ್ಕೆ ಸ್ವಾತಂತ್ರ್ಯ ದೊರೆತಿದ್ದು, ಅದನ್ನು ಉಳಿಸಿಕೊಂಡು ಹೋಗಬೇಕಾದ ಹೊಣೆಗಾರಿಕೆ ಎಲ್ಲರ ಮೇಲಿದೆ ಎಂದು ನಿವೃತ್ತ ಶಿಕ್ಷಕ ಎಟಿ ಮಲ್ಲೇಶ್ ಹೇಳಿದರು.ಪಟ್ಟಣದ ಯಡೂರು ಕ್ರಾಸ್ ರಸ್ತೆ ಬಳಿ ಇರುವ ಎಫ್.ಎಂ ಚಿಕನ್ ಸೆಂಟರ್ ಆವರಣದಲ್ಲಿ ಯುವಕರ ಬಳಗದ ಚೇತನ್ ಹಾಗೂ ನವಾಜ್ ಅವರ ನೇತೃತ್ವದಲ್ಲಿ ಆಯೋಜಿಸಿದ್ದ 78ನೇ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು. ಭಾರತ ದೇಶ ಅನೇಕ ಭಾಷೆ, ಧರ್ಮ ಅನೇಕ ಜಾತಿಗಳಿಂದ ಕೂಡಿದ ಪ್ರಜಾಪ್ರಭುತ್ವ ರಾಷ್ಟ್ರವಾಗಿದೆ. ದೇಶದಲ್ಲಿ ಕೋಮುವಾದ, ಭ್ರಷ್ಟಾಚಾರ, ಜಾತಿ ಸೇರಿದಂತೆ ಅನಿಷ್ಟ ಪದ್ಧತಿ ನಿರ್ಮೂಲನೆಗಾಗಿ ಶ್ರಮಿಸಬೇಕಾಗಿದೆ. ಮಕ್ಕಳಿಗೆ ದೇಶಾಭಿಮಾನ ಬೆಳೆಸಲು ರಾಷ್ಟ್ರನಾಯಕರ, ಮಹಾನ್ ಪುರುಷರ , ಶರಣರ, ದಾರ್ಶನಿಕರ ಜೀವನ ಆಧಾರಿತ ವಿಷಯ ಹೇಳಬೇಕು ಎಂದು ಹೇಳಿದರು.
ಈ ವೇಳೆ ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಸಮಾಜ ಸೇವಕರನ್ನು ಹಾಗೂ ಪೌರಕಾರ್ಮಿಕರನ್ನು ಗುರುತಿಸಿ ಗೌರವಿಸಿ ಸನ್ಮಾನಿಸಲಾಯಿತು. ಕಾರ್ಯಕ್ರಮಕ್ಕೆ ಆಗಮಿಸಿದ ಪ್ರತಿಯೊಬ್ಬರಿಗೂ ಅನ್ನದಾಸೋಹ ವ್ಯವಸ್ಥೆ ಏರ್ಪಡಿಸಲಾಗಿತ್ತು.ಈ ಸಂದರ್ಭದಲ್ಲಿ ಯುವಕರ ಬಳಗದ ಸಂಘದ ಸದಸ್ಯರಾದ ಚೇತನ್, ಆರಿಫ್, ಬಾಬಣ್ಣ, ಮುಬಾರಕ್, ಕರವೇ ಅಧ್ಯಕ್ಷ ರಾಘವೇಂದ್ರ, ಎಫ್ಎಂ ಚಿಕನ್ ಸೆಂಟರ್ ಮಾಲೀಕ ನವಾಜ್, ಜಾಮಿಯ ಮಸೀದಿ ಮಾಜಿ ಅಧ್ಯಕ್ಷ ಅಬ್ದುಲ್ ವಾಹಿದ್, ಸದಸ್ಯ ಕಬೀರ್ ಅಹ್ಮದ್ ಮುಂತಾದವರು ಹಾಜರಿದ್ದರು.
ಫೋಟೋ ಕ್ಯಾಪ್ಶನ್ : ಆಲೂರು ಪಟ್ಟಣದ ಯಡೂರು ಕ್ರಾಸ್ ಬಳಿ ಇರುವ ಎಫ್ ಎಂ. ಸಿ ಚಿಕನ್ ಸೆಂಟರ್ ಆವರಣದಲ್ಲಿ 78ನೇ ಸ್ವಾತಂತ್ರ್ಯ ದಿನಾಚರಣೆ ಆಚರಿಸಲಾಯಿತು.