ಜನಮನ ಸೆಳೆದ ಸಂಸ್ಕೃತಲಹರೀ ಸಾಂಸ್ಕೃತಿಕ ಕಾರ್ಯಕ್ರಮ

| Published : Feb 13 2025, 12:47 AM IST

ಸಾರಾಂಶ

ಒಂದು ಕಾಶ್ಮೀರ ಕವಿ ಕ್ಷೇಮೇಂದ್ರ ರಚಿಸಿದ ಸಂಸ್ಕೃತ ಕಾವ್ಯ ‘ದರ್ಪದಲನಂ’ ನೃತ್ಯ ನಾಟಕ. ಇದನ್ನು ಕನ್ನಡಕ್ಕೆ ವಿದ್ವಾನ್ ಡಾ.ಎಚ್.ವಿ. ನಾಗರಾಜರಾಯರು ಅನುವಾದಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಮೈಸೂರುನಗರದ ಶ್ರೀ ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ ಜ್ಞಾನ ಕುಂಭ ದರ್ಶಿನಿಯೊಂದಿಗೆ ಆರಂಭವಾದ ಸಂಸ್ಕೃತ ಭಾರತೀಯ ಸಂಸ್ಕೃತ ಕಾವೇರೀ ಎಂಬ ಹೆಸರಿನ ದಕ್ಷಿಣಪ್ರಾಂತ ಸಮ್ಮೇಳನದಲ್ಲಿ ವಿವಿಧ ಜಿಲ್ಲೆಗಳಿಂದ ಬಂದಿದ್ದ 800 ಪ್ರತಿನಿಧಿಗಳು ಭಾಗವಹಿಸಿ ಸಂಸ್ಕೃತ ಭಾಷೆಯ ಪ್ರಸಾರದ ಬಗ್ಗೆ ವಿಚಾರ ವಿಮರ್ಶೆಗಳನ್ನ ಮಾಡಿದರು.ಈ ಸಮ್ಮೇಳನದಲ್ಲಿ ವಸ್ತು-ವಿಜ್ಞಾನ-ಪುಸ್ತಕ ಪ್ರದರ್ಶಿನಿಯು ಜನಮನವನ್ನು ಸೆಳೆದುದಲ್ಲದೆ ಶೋಭಾಯಾತ್ರೆಯ ನಂತರ ನಡೆದ ಸಂಸ್ಕೃತ-ಲಹರೀ ಸಾಂಸ್ಕೃತಿಕ ಕಾರ್ಯಕ್ರಮವೂ ಸಹ ಪ್ರತಿನಿಧಿಗಳ ಹಾಗೂ ಸಾರ್ವಜನಿಕರ ಮನವನ್ನು ಸೆಳೆಯಿತು.ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ನಿತಿನ್ ಸ್ ನಾದಾಮೃತ ಸಂಗೇತ ಶಾಲೆಯ ಪುಟಾಣಿ ವಿದ್ಯಾರ್ಥಿಗಳು ಅಮೃತ ನಿತಿನ್ ರಾಜಾರಾಮ್ ಶಾಸ್ತ್ರಿ ಅವರ ಮಾರ್ಗದರ್ಶನದಲ್ಲಿ ಹಲವು ಸಂಸ್ಕೃತ ಗೀತೆಗಳನ್ನು ಹಾಡಿದರು .ಒಂದು ಕಾಶ್ಮೀರ ಕವಿ ಕ್ಷೇಮೇಂದ್ರ ರಚಿಸಿದ ಸಂಸ್ಕೃತ ಕಾವ್ಯ ‘ದರ್ಪದಲನಂ’ ನೃತ್ಯ ನಾಟಕ. ಇದನ್ನು ಕನ್ನಡಕ್ಕೆ ವಿದ್ವಾನ್ ಡಾ.ಎಚ್.ವಿ. ನಾಗರಾಜರಾಯರು ಅನುವಾದಿಸಿದ್ದಾರೆ. ಇದನ್ನು ಗೇಯ ರೂಪಕವಾಗಿ ನೃತ್ಯ ರೂಪಕವಾಗಿ ಮೈಸೂರಿನ ಚಂಪಕ ಅಕಾಡೆಮಿ ಸಂಸ್ಥಾಪಕಿ ಡಾ. ನಾಗಲಕ್ಷ್ಮಿ ನಾಗರಾಜನ್ ಅವರ ಪರಿಕಲ್ಪನೆಯಲ್ಲಿ ಹಾಗೂ ನಿರ್ದೇಶನದಲ್ಲಿ ಸಂಸ್ಕೃತ ಕಾವೇರಿ ಸಮ್ಮೇಳನದಲ್ಲಿ ಪ್ರಯೋಗ ಮಾಡಲಾಯಿತು.ಈ ಪದ್ಯಾತ್ಮಕ ಕೃತಿಯು ನೀತಿ ಭೋದಕವಾಗಿರುವುದರಿಂದ, ಇದು ಈಗಲೂ ಸಾಮಾಜಿಕವಾಗಿ ಅನ್ವಯವಾಗಿರುವುದರಿಂದ 15 ಶತಮಾನಗಳ ಹಿಂದೆ ರಚಿಸಿದ್ದೆಯಾದರು ಈಗಲೂ ಇದರ ಪ್ರಾಮುಖ್ಯತೆ ಇರುವುದು.ಕ್ಷೇಮೇಂದ್ರನು ದರ್ಪಕ್ಕೆ ಕಾರಣವಾದ ಏಳು ಹೇತುಗಳನ್ನು ಇಲ್ಲಿ ಉದ್ದರಿಸಿದ್ದಾನೆ. ಕುಲ ಧನ ವಿದ್ಯೆ ರೂಪ ಶೌರ್ಯ ದಾನ ಹಾಗೂ ತಪಸ್ಸು. ಈ ಏಳು ದರ್ಪ ಮದ ಹೇತುಗಳನ್ನು ಒಂದೊಂದು ಅಧ್ಯಾಯದಲ್ಲಿ ವಿವರಿಸಿ ಅದಕ್ಕೆ ಅನುಗುಣವಾದ ಕಥೆಯನ್ನು ಹೊಂದಿಸಿ ಪದ್ಯ ಕಾವ್ಯವನ್ನು ರಚಿಸಿದ್ದಾನೆ.2ನೇ ಅಧ್ಯಾಯದಲ್ಲಿ ಮದ ಹೇತುವಾದ ಧನವಿಚಾರದಲ್ಲಿ ಕ್ಷೇಮೇಂದ್ರನು ಹೇಳಿರುವ ಕಥಾಪ್ರಸಂಗವನ್ನು ಚಂಪಕ ಅಕಾಡೆಮಿ ವಿದ್ಯಾರ್ಥಿಗಳಾದ ಶ್ರೇಯ ವಿಜಯ್, ಆರ್.ಜೆ. ಪೂಜಾ, ಜಿ.ಜಿ. ವರ್ಷಿತ, ಎಸ್.ಎಸ್. ಮಂಜುಶ, ಎಸ್. ಸೌಗಂಧಿಕ, ಎನ್. ಶ್ರೇಷ್ಠ, ಎಸ್.ಎಸ್. ನಿಷಿತ ಎಲ್ಲರೂ ಪೂರಕವಾಗಿ ನರ್ತಿಸಿ ಅಭಿನಯಿಸಿದರು.ವಿದ್ವಾನ್ ಗುಣಶಂಕರ ಸ್ವಾಮಿ ಜಿಪುಣ ನಂದನ ಪಾತ್ರದಲ್ಲಿ ಉತ್ತಮ ಅಭಿನಯವನ್ನು ತೋರಿದನು. ಪರಿಕಲ್ಪನೆ ಮತ್ತು ನಟುವಾಂಗ ಡಾ. ನಾಗಲಕ್ಷ್ಮಿ ನಾಗರಾಜನ್, ಸಂಗೀತ ಸಂಯೋಜನೆ ಹಾಗೂ ಹಾಡುಗಾರಿಕೆ ಚೇತನ ಚಿತ್ರದುರ್ಗ, ಕೊಳಲಿನಲ್ಲಿ ಸ್ಮಿತಾ ಶ್ರೀಕಿರಣ್, ಮೃದಂಗ ನಂದನ್ ಕಶ್ಯಪ್ . ಸಾಮಾಜಿಕವಾಗಿ ಈಗಲೂ ವಿವೇಕ ಪೂರಕವಾಗಿ ಇರುವಂತಹ 15 ಶತಮಾನಗಳ ಹಿಂದಿನ ಈ ಸಾಹಿತ್ಯದ ಪರಿಕಲ್ಪನೆ ಹಾಗೂ ಸಂಯೋಜನೆ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು. ಅವನಿಯ ಏಕಪಾತ್ರಾಭಿನಯವು ಆಕರ್ಷಣೀಯವಾಗಿ ಮೂಡಿಬಂದಿತು . ಪುಟಾಣಿ ಮಕ್ಕಳು ಅಭಿನಯಿಸಿದ ಬಾಲರಾಮ ನಾಟಕವು ಎಲ್ಲರ ಮನೋರಂಜನೆ ಕಾರಣವಾಯಿತು.