ಸಾರಾಂಶ
ಗುರುಪೂರ್ಣಿಮೆ ನಿಮಿತ್ತ ಭಾಗ್ಯನಗರದಲ್ಲಿರುವ ಶ್ರೀಸಾಯಿಬಾಬಾ ದೇವಸ್ಥಾನಕ್ಕೆ ಗುರುವಾರ ಅಪಾರ ಸಂಖ್ಯೆಯ ಭಕ್ತರು ಆಗಮಿಸಿ ಸಾಯಿಬಾಬಾ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು. ಅಭಿಷೇಕ ಸೇರಿದಂತೆ ಮೊದಲಾದ ಧಾರ್ಮಿಕ ವಿಧಿ-ವಿಧಾನ ನಡೆದವು.
ಕೊಪ್ಪಳ:
ಗುರುಪೂರ್ಣಿಮೆ ನಿಮಿತ್ತ ಭಾಗ್ಯನಗರದಲ್ಲಿರುವ ಶ್ರೀಸಾಯಿಬಾಬಾ ದೇವಸ್ಥಾನಕ್ಕೆ ಗುರುವಾರ ಅಪಾರ ಸಂಖ್ಯೆಯ ಭಕ್ತರು ಆಗಮಿಸಿ ಸಾಯಿಬಾಬಾ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು. ಅಭಿಷೇಕ ಸೇರಿದಂತೆ ಮೊದಲಾದ ಧಾರ್ಮಿಕ ವಿಧಿ-ವಿಧಾನ ನಡೆದವು.ಬೆಳಗ್ಗೆಯಿಂದಲೇ ದೇವಸ್ಥಾನಕ್ಕೆ ಭಕ್ತರು ಆಗಮಿಸಿ ಸರತಿ ಸಾಲಿನಲ್ಲಿ ನಿಂತುಕೊಂಡು ದರ್ಶನ ಪಡೆದರು. ಮಧ್ಯಾಹ್ನ ಭಕ್ತರ ಸಂಖ್ಯೆ ಅಧಿಕವಾಗಿದ್ದರಿಂದ ಟ್ರಾಫಿಕ್ ಸಮಸ್ಯೆಯಾಯಿತು. ವಾಹನಗಳು ರಸ್ತೆ ಇಕ್ಕೆಲಗಳಲ್ಲಿ ನಿಂತುಕೊಂಡು ಪರಿಣಾಮ ಜನರು ನಡೆದುಕೊಂಡು ಹೋಗಲು ತೊಂದರೆಯಾಯಿತು. ಬಳಿಕ ಪೊಲೀಸರು ಟ್ರಾಫಿಕ್ ಸಮಸ್ಯೆ ನಿವಾರಿಸಿ ಭಕ್ತರಿಗೆ ಅನುಕೂಲ ಮಾಡಿಕೊಟ್ಟರು. ಕಳೆದ ವರ್ಷಕ್ಕಿಂತ ಈ ವರ್ಷ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದರಿಂದ ಗಂಟೆಗಟ್ಟಲೇ ಸರತಿಯಲ್ಲಿ ನಿಲ್ಲಬೇಕಾಯಿತು.
ಪ್ರಸಾದ ವ್ಯವಸ್ಥೆ:ದೇವಸ್ಥಾನಕ್ಕೆ ಬಂದ ಭಕ್ತರಿಗೆ ದೇವಸ್ಥಾನದ ಸಮೀಪವೇ ಪೆಂಡಾಲ್ ಹಾಕಿ ಪ್ರಸಾದ ವಿತರಿಸಲಾಯಿತು. 5 ಕ್ವಿಂಟಲ್ ಗೋಧಿ ಹುಗ್ಗಿ, 10 ಕ್ವಿಂಟಲ್ ಅನ್ನ, ಸಾಂಬರ್ ಪ್ರಸಾದವನ್ನು ಭಕ್ತರು ಸ್ವೀಕರಿಸಿದರು.
ಈ ವೇಳೆ ಹಿರಿಯರಾದ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಶ್ರೀನಿವಾಸ ಗುಪ್ತಾ, ಯಮನಪ್ಪ ಕಬ್ಬೇರ, ಉಮಾಕಾಂತ ಕಟಾರೆ, ಹನುಮಂತ ನಾಯಕರ್, ಪೆದ್ದ ಸುಬ್ಬಯ್ಯ, ರವಿ ಕುರಗೋಡ, ಭೀಮಸೇನಾ ಸಾ ಮೇಘರಾಜ, ಗಿರೀಶ್ ಪಾನಘಂಟಿ ಇದ್ದರು.2000 ಭಗವದ್ಗೀತೆ ವಿತರಣೆ
ಸಾಯಿಬಾಬಾ ದೇವಸ್ಥಾನಕ್ಕೆ ಬಂದ ಭಕ್ತರಿಗೆ ಇನ್ನರ್‌ವೀಲ್ ಕ್ಲಬ್ ವತಿಯಿಂದ 2000 ಭಗವದ್ಗೀತೆ ಪುಸ್ತಕ ವಿತರಿಸಲಾಯಿತು. ಈ ವೇಳೆ ಭಾಗ್ಯನಗರ ಇನ್ನರ್‌ವೀಲ್ ಕ್ಲಬ್ ಅಧ್ಯಕ್ಷೆ ಸುನಿತಾ ಎಸ್.ಅಂಟಾಳಮರದ, ಕಾರ್ಯದರ್ಶಿ ರಮಾ ವಿ. ಅಂಟಾಳಮರದ, ಲಕ್ಷ್ಮೀ ದಲಬಂಜನ್, ಸುನಿತಾ ಕಟವಟೆ, ಲಕ್ಷ್ಮಿ ಕಟವಟೆ, ರಾಕಿ ಮಗಜೀ ಇದ್ದರು.