ಸಾರಾಂಶ
ಹನೂರು: ಸವಿತಾ ಸಮುದಾಯದ ಬೇಡಿಕೆಗಳನ್ನು ಈಡೇರಿಸುವಂತೆ ಸರ್ಕಾರದ ಗಮನ ಸೆಳೆಯಲು ಮಲೆ ಮಹದೇಶ್ವರ ಬೆಟ್ಟದಿಂದ ಮಂತ್ರಾಲಯಕ್ಕೆ ಯುವಕನೊಬ್ಬ ಪಾದಯಾತ್ರೆ ಕೈಗೊಂಡಿದ್ದಾನೆ. ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟದ ರತ್ನಮ್ಮ ಮತ್ತು ರಾಜು ದಂಪತಿ ಪುತ್ರ ಆನಂದ್ ಸಮುದಾಯಗಳ ಬೇಡಿಕೆಗಾಗಿ ಒತ್ತಾಯಿಸಿ ಪಾದಯಾತ್ರೆ ಹೊರಟಿರುವ ಯುವಕ. ಸಮಾಜದ ಎಂಟು ಬೇಡಿಕೆಗಳಿಗೆ ಸವಿತಾ ಶ್ರೀಧರನಂದನ ಸ್ವಾಮೀಜಿ ನಡೆಸುತ್ತಿರುವ ಮೀಸಲಾತಿ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಲು ಮೀಸಲಾತಿಗಾಗಿ ಸರ್ಕಾರದ ಗಮನ ಸೆಳೆಯಲು ಮಲೆ ಮಹದೇಶ್ವರ ಬೆಟ್ಟದಿಂದ ಮಂತ್ರಾಲಯಕ್ಕೆ 600 ಕಿಮೀ ಪಾದಯಾತ್ರೆ ಹೊರಟಿರುವ ಯುವಕನಿಗೆ ಸಮುದಾಯದ ಮುಖಂಡರು ಶುಭ ಹಾರೈಸಿದ್ದಾರೆ.

----