ಕೆಂಪೇಗೌಡ ಉತ್ಸವದಲ್ಲಿ ಕಲಾವಿದರೆಲ್ಲಾ ಪಾಲ್ಗೊಳ್ಳಿ

| Published : Nov 10 2025, 12:45 AM IST

ಸಾರಾಂಶ

ಮಾಗಡಿ: ಪ್ರತಿಭೆಗಳ ಅನಾವರಣಕ್ಕಾಗಿ ನ.22ರಿಂದ ಡಿ‌.28ರವರೆಗೆ ವಿವಿಧ ಕ್ರೀಡಾಕೂಟ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ಶಾಸಕ ಎಚ್.ಸಿ.ಬಾಲಕೃಷ್ಣ ‌ಹೇಳಿದರು.

ಮಾಗಡಿ: ಪ್ರತಿಭೆಗಳ ಅನಾವರಣಕ್ಕಾಗಿ ನ.22ರಿಂದ ಡಿ‌.28ರವರೆಗೆ ವಿವಿಧ ಕ್ರೀಡಾಕೂಟ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ಶಾಸಕ ಎಚ್.ಸಿ.ಬಾಲಕೃಷ್ಣ ‌ಹೇಳಿದರು

ಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿ ಶನಿವಾರ ಕೆಂಪೇಗೌಡ ಉತ್ಸವ ಕಾರ್ಯಕ್ರಮದ ಆಹ್ವಾನ ಪತ್ರಿಕೆ ಬಿಡುಗಡೆ ಮಾಡಿ‌ ಮಾತನಾಡಿದ ಅವರು, ಕನಕೋತ್ಸವದ ಅಂಗವಾಗಿ ಮೊದಲ ಬಾರಿಗೆ ಕೆಂಪೇಗೌಡ ಉತ್ಸವವನ್ನು ಆಯೋಜಿಸಲಾಗಿದೆ. ತಾಲೂಕಿನ ಕಲಾವಿದರಿಗೆ ವೇದಿಕೆ ಅವಕಾಶ ಕಲ್ಪಿಸಿಕೊಟ್ಟು ಅವರಲ್ಲಿ ಅಡಗಿರುವ ಪ್ರತಿಭೆಯನ್ನು ಹೊರ ತರಲು ಪ್ರಯತ್ನಿಸಲಾಗುವುದು. 45 ದಿನಗಳ ಕಾಲ ಕೆಂಪೇಗೌಡ ಉತ್ಸವ ನಡೆಯುವುದರಿಂದ ಭಾಗವಹಿಸುವ ಪ್ರತಿಯೊಬ್ಬರು ನೋಂದಣಿ ಮಾಡಿಕೊಂಡು ತಮಗೆ ಆಸಕ್ತಿ ಇರುವ ಕ್ರೀಡೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗವಹಿಸಿ, ಕನಕಪುರದಲ್ಲಿ ನಡೆಯುವ ಜಿಲ್ಲಾಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಿ ತಾಲೂಕಿಗೆ ಕೀರ್ತಿ ತರಬೇಕು. ಹೋಬಳಿ ಅಂತ ತಾಲೂಕು ಮಟ್ಟದ ಕಾರ್ಯಕ್ರಮಗಳಲ್ಲಿ ಕಡ್ಡಾಯವಾಗಿ ತಾಲೂಕಿನವರು ಮಾತ್ರ ಭಾಗವಹಿಸಲು ಅವಕಾಶ ಮಾಡಿಕೊಡಲಾಗಿದೆ. ಭಾಗವಹಿಸಲು ಆಸಕ್ತರು ಕಡ್ಡಾಯವಾಗಿ ಆಧಾರ್ ಕಾರ್ಡ್ ತರಬೇಕು ಎಂದು ತಿಳಿಸಿದರು.

ಮಾಗಡಿ ನೆಲದ ಸೊಗಡು ಅತ್ಯಂತ ವಿಶಿಷ್ಟವಾದುದು, ಇಲ್ಲಿನ ಇತಿಹಾಸದ ಹೆಗ್ಗುರುತುಗಳು, ಧಾರ್ಮಿಕ ಶ್ರೀಮಂತಿಕೆ, ಗ್ರಾಮೀಣ ಕಲೆ ಮತ್ತು ಸಾಂಸ್ಕೃತಿಕ ವಿಭಿನ್ನತೆಯನ್ನ ಸಾರುತ್ತಿವೆ. ಐಕ್ಯತೆ ಭಾವೈಕ್ಯತೆಯನ್ನ ಸಾರುವ ನೆಲದಲ್ಲಿ ಗ್ರಾಮೀಣ ಪ್ರತಿಭೆಗಳಿಗೆ ಪ್ರೋತ್ಸಾಹ ಬೆಂಬಲ ನೀಡಿ ರಾಜ್ಯ ರಾಷ್ಟ್ರ ಮಟ್ಟದಲ್ಲೂ ಮಾಗಡಿ ಪ್ರತಿಭೆಗಳು ಅನಾವರಣಗೊಳ್ಳಲಿ ಎಂಬ ಕಾರಣಕ್ಕೆ ಕ್ರೀಡಾ ಮತ್ತು ಸಾಂಸ್ಕೃತಿಕ ಹಬ್ಬವನ್ನ ಸಂಭ್ರಮ ಸಡಗರದಿಂದ ಆಚರಿಸಲಾಗುತ್ತದೆ ಎಂದರು.

ಕಾರ್ಯಕ್ರಮವನ್ನು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಬಮೂಲ್‌ ಅಧ್ಯಕ್ಷರಾದ ಡಿ.ಕೆ.ಸುರೇಶ್‌ ಮಾರ್ಗದರ್ಶನದಲ್ಲಿ ಕೆಂಪೇಗೌಡ ಉತ್ಸವ ನಡೆಯುತ್ತಿದ್ದು ಪಕ್ಷಾತೀತವಾಗಿ ಎಲ್ಲರೂ ಕಾರ್ಯಕ್ರಮದಲ್ಲಿ ಭಾಗವಹಿಸಬಹುದು. ಸರ್ಕಾರಿ ಅಧಿಕಾರಿಗಳನ್ನು ಒಮ್ಮತದಿಂದ ಸೇರಿಸಿ ಕಾರ್ಯಕ್ರಮ ನಡೆಸಲಾಗುತ್ತಿದೆ ಎಂದು ವಿವರಿಸಿದರು.

ಹೋಬಳಿ ಮಟ್ಟದ ಸ್ಪರ್ಧೆಗಳ ವಿವಿರ: ಕ್ರಿಕೆಟ್, ವಾಲಿಬಾಲ್, ಥ್ರೋಬಾಲ್, ಷಟಲ್ ಬ್ಯಾಡ್ಮಿಂಟನ್, ಪಂದ್ಯಾವಳಿಯ ವಿಜೇತ ತಂಡಗಳಿಗೆ ಬಹುಮಾನ ಪ್ರಥಮ - 15 ಸಾವಿರ, ದ್ವಿತೀಯ - ₹10 ಸಾವಿರ, ತೃತೀಯ - ₹ 5 ಸಾವಿರ ಬಹುಮಾನ ಹಾಗೂ

ಭಾಗವಹಿಸುವ ಪ್ರತಿ ಸ್ಪರ್ಧಾಳುಗಳಿಗೆ ಟೀ-ಶರ್ಟ್ ನೀಡಲಾಗುವುದು.

ವಾಯ್ಸ್ ಆಫ್ ಮಾಗಡಿ: 16 ವರ್ಷ ಮೇಲ್ಪಟ್ಟವರಿಗೆ ಪ್ರತಿ ಹೋಬಳಿ‌ ಮಟ್ಟದಲ್ಲೂ ರಂಗಗೀತೆ, ಸೋಲೋ ಸಿಂಗಿಂಗ್, ರಂಗ ಗೀತೆ(ಜಾನಪದ, ಚಲನಚಿತ್ರ, ಭಕ್ತಿಗೀತೆ)ಸಮೂಹ ಗಾಯನ, (ಜಾನಪದ, ಚಲನಚಿತ್ರ, ಭಕ್ತಿಗೀತೆ) ಸಮೂಹ ನೃತ್ಯ (ಜಾನಪದ, ಚಲನಚಿತ್ರ, ಭಕ್ತಿಗೀತೆ).

ಡಿಸೆಂಬರ್ 25 ಮ್ಯಾರಥಾನ್ ಓಟ: ಪುರುಷರಿಗೆ ಹಸಿರೇ ಉಸಿರು ನಮ್ಮ ಪ್ರಕೃತಿಗಾಗಿ ನಮ್ಮ ಓಟ ​ಮಾರ್ಗ: ಹೊಸಪೇಟೆ ವೃತ್ತದಿಂದ ನಾಯಕನಪಾಳ್ಯ ಗೇಟ್‌ವರೆಗೆ ​ "ನಮ್ಮ ಚಿತ್ತ ಅಭಿವೃದ್ಧಿ ಪಥದತ್ತ " ಘೋಷವಾಕ್ಯದೊಂದಿಗೆ.ಪ್ರತಿಭಾ ಪುರಸ್ಕಾರ , ಸಮೂಹ ನೃತ್ಯ/ಸಮೂಹ ಗೀತಗಾಯನ ಜಾನಪದ, ದೇಶಭಕ್ತಿಗೀತೆ, ಚಲನಚಿತ್ರಗೀತೆ.

​​ಡಿ.26 ಮಹಿಳೆಯರಿಗೆ ಮ್ಯಾರಥಾನ್: ಬೆಳಿಗ್ಗೆ 6 ಗಂಟೆಗೆ ​ಮಹಿಳೆಯರಿಗಾಗಿ "ಹಸಿರೇ ಉಸಿರು " ಘೋಷವಾಕ್ಯದಡಿ ಮಾಗಡಿ ಸೋಮೇಶ್ವರ ದೇವಾಲಯದಿಂದ ಕಲ್ಯಾ ಗೇಟ್, ಡೂಲೈಟ್ ವೃತ್ತ, ಕೆಂಪೇಗೌಡ ವೃತ್ತದ ಮಾರ್ಗವಾಗಿ, ಎನ್ಇಎಸ್ ವೃತ್ತದ ಮೂಲಕ ತಿರುಮಲೆ ರಂಗನಾಥಸ್ವಾಮಿ ದೇವಾಲಯದ ಸನ್ನಿಧಿವರೆಗೆ.

ಸ್ಥಳದಲ್ಲೇ ಚಿತ್ರ ಬಿಡಿಸುವ ಸ್ಪರ್ಧೆ: "​ರಂಗಗೀತೆ " ದಂಪತಿಗಳ ಫ್ಯಾಷನ್ ಶೋ(ಸಾಂಪ್ರದಾಯಿಕ ಉಡುಗೆಗಳು, ವೇಷಭೂಷಣ ಸ್ಪರ್ಧೆ " ​ಡಿ.27 ಶನಿವಾರದ ರಂಗೋಲಿ ಸ್ಪರ್ಧೆ, ದೇವರ ಉತ್ಸವ, ರಂಗೋಲಿ ಬಿಡುವುದು. ವಾದ್ಯ ಗೋಷ್ಠಿ, ವಾಯ್ಸ್ ಆಫ್ ಮಾಗಡಿ, ದೇಹದಾರ್ಢ್ಯ ಸ್ಪರ್ಧೆ, ದೇವರ ಭಜನೆ ತಿರುಪತಿ ತಿರುಮಲ ಟ್ರಸ್ಟ್ ವತಿಯಿಂದ ದೇವರ ದರ್ಶನ ಮತ್ತು ಶ್ರೀನಿವಾಸ ಕಲ್ಯಾಣೋತ್ಸವ ಕಾರ್ಯಕ್ರಮ ಸಂಜೆ 6 ರಿಂದ 7.30 ಗಂಟೆಗೆ ಶ್ರೀನಿವಾಸ ಕಲ್ಯಾಣೋತ್ಸವಕ್ಕೆ ಆಗಮಿಸುವ ತಿರುಪತಿ ಶ್ರೀನಿವಾಸಸ್ವಾಮಿ ಲಡ್ಡುಪ್ರಸಾದ ನೀಡಲಾಗುವುದು.

ಪ್ರಗತಿ ಪರ ರೈತರಿಗೆ ಮತ್ತು ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಸಾಧಕರಿಗೆ ಗೌರವ ಪುರಸ್ಕಾರ, ಮಾಗಡಿ ಕೆಂಪೇಗೌಡ ಉತ್ಸವದ ಅಂಗವಾಗಿ ನಡೆದ ಕ್ರೀಡಾ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳ ವಿಜೇತರಿಗೆ/ವಿಜೇತ ತಂಡಗಳಿಗೆ ಬಹುಮಾನ ವಿತರಣೆ.

ಡಿ.28ರಂದು ಭಾನುವಾರದ ಸಂಜೆ 6 ಗಂಟೆಯಿಂದ ಲೈವ್ ಮ್ಯೂಸಿಕಲ್ ನೈಟ್ ಮತ್ತು ನಿರೂಪಕಿ ಅನುಶ್ರೀ ಮತ್ತು ಖ್ಯಾತ ಹಿನ್ನೆಲೆ ಗಾಯಕರಾದ ಹೇಮಂತ್, ಅನುರಾಧಾ ಭಟ್ ಸಂಗೀತ ರಸ ಸಂಜೆ ಕಾರ್ಯಕ್ರಮ ನಡೆಯಲಿದೆ. ಎಲ್ಲಾ ಕಾರ್ಯಕ್ರಮಗಳು ಮಾಗಡಿ ಕೋಟೆ ಮೈದಾನದಲ್ಲಿ ಆಯೋಜಿಸಲಾಗಿದೆ ಎಂದು ಬಾಲಕೃಷ್ಣ ವಿವರಿಸಿದರು.

ಇದೆ ವೇಳೆ ಕಾಂಗ್ರೆಸ್ ಮುಖಂಡರಾದ ಪೂಜಾರಿಪಾಳ್ಯ ಕೃಷ್ಣಮೂರ್ತಿ, ಬಿ.ಎಸ್.ಕುಮಾರ್, ರೂಪೇಶ್ ಕುಮಾರ್, ತೇಜು, ಮಂಜುನಾಥ್, ಶಿವಕುಮಾರ್, ಅಶ್ವಥ್, ಗಂಗರಾಜು ಇತರರು ಭಾಗವಹಿಸಿದ್ದರು.