ಸಾರಾಂಶ
, ಈ ಬಾರಿ ನಾವೆಲ್ಲರೂ ಎಂ. ಪ್ರದೀಪ್ ಕುಮಾರ್ ಅವರಿಗೆ ಸಹಕಾರ ನೀಡಬೇಕು, ಜತೆಗೆ ಅರ್ಥಿಕ ಸಹಕಾರ ಬಹಳ ಮುಖ್ಯ, ಈ ನಿಟ್ಟಿನಲ್ಲಿ ನಾನು ಕಾರ್ಯಕ್ರಮಕ್ಕೆ 50 ಸಾವಿರ ನೀಡುತ್ತಿದ್ದೇನೆ
ಕನ್ನಡಪ್ರಭ ವಾರ್ತೆ ಮೈಸೂರು
ಶರಣರ ತತ್ವವನ್ನು ಸಮಾಜಕ್ಕೆ ತಿಳಿಸುವ ನಿಟ್ಟಿನಲ್ಲಿ ಬಸವ ಬಳಗಗಳ ಒಕ್ಕೂಟದಿಂದ ಮೇ 26 ರಂದು ನಗರದ ಮಹಾರಾಜ ಕಾಲೇಜು ಮೈದಾನದಲ್ಲಿ ಅದ್ದೂರಿಯಾಗಿ ಬಸವ ಜಯಂತಿ ಕಾರ್ಯಕ್ರಮ ನಡೆಸಲು ತೀರ್ಮಾನಿಸಲಾಗಿದೆ ಎಂದು ಬಸವ ಬಳಗಳ ಒಕ್ಕೂಟದ ಜಿಲ್ಲಾಧ್ಯಕ್ಷ ಎಂ. ಪ್ರದೀಪ್ ಕುಮಾರ್ ಹೇಳಿದರು.ಅಖಿಲ ಭಾರತ ವೀರಶೈವ ಮಹಾಸಭಾ, ವೀರಶೈವ ಸಂಘ ಸಂಸ್ಥೆಗಳು ಹಾಗೂ ವೀರಶೈವ ಬಸವ ಬಳಗಳ ಒಕ್ಕೂಟದ ಸಹಯೋಗದಲ್ಲಿ ಮೇ 26 ರಂದು ಬಸವ ಜಯಂತಿ ಕಾರ್ಯಕ್ರಮ ಆಯೋಜನೆ ಸಂಬಂಧವಾಗಿ ಸುತ್ತೂರು ಮಠದಲ್ಲಿ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.
ಅಂದು ಬೆಳಗ್ಗೆಯಿಂದ ರಾತ್ರಿಯವರೆಗೂ ವಿವಿಧ ಕಾರ್ಯಕ್ರಮ, ಗೋಷ್ಠಿಗಳು ನಡೆಯಲಿವೆ. ನಾಡಿನ ವಿವಿಧ ಮಠಾಧೀಶರು ಕಾರ್ಯಕ್ರಮಕ್ಕೆ ಆಗಮಿಸುತ್ತಾರೆ, ಪ್ರತಿಯೊಬ್ಬರು ಕಾರ್ಯಕ್ರಮಕ್ಕೆ ಸಹಕಾರ ನೀಡಬೇಕು ಎಂದು ಅವರು ಕೋರಿದರು.ಬಸವ ಬಳಗಗಳ ಒಕ್ಕೂಟದ ಮಾಜಿ ಅಧ್ಯಕ್ಷ ಟಿ.ಎಸ್. ಲೋಕೇಶ್ ಮಾತನಾಡಿ, ಈ ಬಾರಿ ನಾವೆಲ್ಲರೂ ಎಂ. ಪ್ರದೀಪ್ ಕುಮಾರ್ ಅವರಿಗೆ ಸಹಕಾರ ನೀಡಬೇಕು, ಜತೆಗೆ ಅರ್ಥಿಕ ಸಹಕಾರ ಬಹಳ ಮುಖ್ಯ, ಈ ನಿಟ್ಟಿನಲ್ಲಿ ನಾನು ಕಾರ್ಯಕ್ರಮಕ್ಕೆ 50 ಸಾವಿರ ನೀಡುತ್ತಿದ್ದೇನೆ ಎಂದು ತಿಳಿಸಿದರು.
ಈ ಬಾರಿ ಅಧ್ಯಕ್ಷರಾಗಿ ಆಯ್ಕೆಯಾದ ಎಂ. ಪ್ರದೀಪ್ ಕುಮಾರ್ ಅವರು ಹೊಸತನ ತಂದಿದ್ದಾರೆ, ವಿಭಿನ್ನವಾಗಿ ಕಾರ್ಯಕ್ರಮ ಆಯೋಜಿಸಲು ಮುಂದಾಗಿದ್ದಾರೆ ಎಂದು ಒಕ್ಕೂಟದ ಮಾಜಿ ಅಧ್ಯಕ್ಷ ಎಂ.ಎಚ್. ಚಂದ್ರಶೇಖರ್ ಹೇಳಿದರುನಿಕಟಪೂರ್ವ ಮಾಧ್ಯಮ ಕಾರ್ಯದರ್ಶಿ ಡಿ. ಚಂದ್ರಶೇಖರ್ ಮಾತನಾಡಿ, ಈ ಬಾರಿ ಎಲ್ಲ ತಾಲೂಕಿಗೂ ಪ್ರಚಾರ ವಾಹನ ಕಳುಹಿಸಿ ಪ್ರಚಾರ ಮಾಡಬೇಕು, ಅಯಾ ತಾಲೂಕು ಅಧ್ಯಕ್ಷರ ಸಮ್ಮುಖದಲ್ಲಿ ಸಭೆ ಮಾಡಿ ಕಾರ್ಯಕ್ರಮಕ್ಕೆ ತಾಲೂಕುಗಳಿಂದ ಹೆಚ್ಚು ಜನರು ಬರುವಂತೆ ಮಾಡಬೇಕು ಎಂದು ಸಭೆಯಲ್ಲಿ ತಿಳಿಸಿದರು.
ಅಖಿಲ ಭಾರತ ವೀರಶೈವ ಮಹಾಸಭಾ ಜಿಲ್ಲಾದ್ಯಕ್ಷ ಕಾನ್ಯ ಶಿವಮೂರ್ತಿ, ಮಾಜಿ ಅಧ್ಯಕ್ಷರಾದ ಬಸವರಾಜು, ಟಿ. ಲಿಂಗರಾಜು, ಎಲ್ ಎಸ್. ಮಹಾದೇವಸ್ವಾಮಿ, ಜಯಾಗೌಡ, ಮೂಗೂರು ನಂಜುಂಡಸ್ವಾಮಿ, ದೂರ ಶಿವಕುಮಾರ್, ಜಯಶಂಕರ ಸ್ವಾಮಿ, ವಕೀಲರಾದ ಚಂದ್ರಮೌಳಿ, ಸಮಾಜದ ಹಿರಿಯರಾದ ಕೆ.ಎನ್. ಪುಟ್ಟಬುದ್ದಿ ಇದ್ದರು.;Resize=(128,128))
;Resize=(128,128))