ಕನ್ನಡಿಗ ಪಾಟೀಲ್‌ಗೆ ಅಮೆರಿಕ ಎಐ ಕಂಪನಿಯ ಉನ್ನತ ಹುದ್ದೆ

| N/A | Published : Oct 05 2025, 09:57 AM IST

US visa

ಸಾರಾಂಶ

ಅಮೆರಿಕ ಮೂಲದ ಆಂಥ್ರೊಪಿಕ್ ಎನ್ನುವ ಕೃತಕ ಬುದ್ಧಿಮತ್ತೆ (ಎಐ) ಸುರಕ್ಷತೆ ಮತ್ತು ಸಂಶೋಧನಾ ಸ್ಟಾರ್ಟಪ್‌ ಕಂಪನಿಯ ಹೊಸ ಮುಖ್ಯ ತಂತ್ರಜ್ಞಾನ ಅಧಿಕಾರಿ (ಸಿಟಿಒ) ಆಗಿ ಬಾಗಲಕೋಟೆ ಮೂಲದವರಾದ ರಾಹುಲ್‌ ಪಾಟೀಲ್‌ ಅವರನ್ನು ನೇಮಕ ಮಾಡಲಾಗಿದೆ.

ವಾಷಿಂಗ್ಟನ್: ಅಮೆರಿಕ ಮೂಲದ ಆಂಥ್ರೊಪಿಕ್ ಎನ್ನುವ ಕೃತಕ ಬುದ್ಧಿಮತ್ತೆ (ಎಐ) ಸುರಕ್ಷತೆ ಮತ್ತು ಸಂಶೋಧನಾ ಸ್ಟಾರ್ಟಪ್‌ ಕಂಪನಿಯ ಹೊಸ ಮುಖ್ಯ ತಂತ್ರಜ್ಞಾನ ಅಧಿಕಾರಿ (ಸಿಟಿಒ) ಆಗಿ ಬಾಗಲಕೋಟೆ ಮೂಲದವರಾದ ರಾಹುಲ್‌ ಪಾಟೀಲ್‌ ಅವರನ್ನು ನೇಮಕ ಮಾಡಲಾಗಿದೆ.

ಬೆಂಗಳೂರಿನ ಪ್ರತಿಷ್ಠಿತ ಪಿಇಎಸ್‌ಐಟಿ ಖಾಸಗಿ ವಿಶ್ವದ್ಯಾಲಯದಲ್ಲಿ 1998ರಲ್ಲಿ ಎಂಜಿನಿಯರಿಂಗ್ ಮುಗಿಸಿದ್ದ ರಾಹುಲ್‌, ನಂತರ ಅಮೆರಿಕದ ವಾಷಿಂಗ್ಟನ್‌ ವಿವಿಯಲ್ಲಿ ಎಂಬಿಎ ಮುಗಿಸಿದ್ದರು. ಮೈಕ್ರೋಸಾಫ್ಟ್ ಹಾಗೂ ಒರಾಕಲ್‌ ಸೇರಿ ಅನೇಕ ಕಂಪನಿಗಳಲ್ಲಿ ಕೆಲಸ ಮಾಡಿದ್ದರು. ಇತ್ತೀಚಿನವರೆಗೂ ಅವರು ಫಿನ್‌ಟೆಕ್ ಸಂಸ್ಥೆ ‘ಸ್ಟ್ರೈಪ್‌’ನಲ್ಲಿ ಸಿಟಿಒ ಆಗಿ ಕೆಲಸ ಮಾಡುತ್ತಿದ್ದರು. ಈಗ ಆಂಥ್ರೊಪಿಕ್‌ನಲ್ಲಿ ಹೊಸ ಪಾತ್ರವನ್ನು ವಹಿಸಿಕೊಳ್ಳಲಿದ್ದಾರೆ. ಕಳೆದ ವರ್ಷ ಆಂಥ್ರೊಪಿಕ್ ಕಂಪನಿ ಮೌಲ್ಯ $183 ಬಿಲಿಯನ್ (₹16 ಲಕ್ಷ ಕೋಟಿ) ಆಗಿದೆ.

ಈ ಬಗ್ಗೆ ಅವರು ಮಾಧ್ಯಮದ ಜತೆ ಮಾತನಾಡಿ, ‘ನನ್ನ ತಂದೆ ಬಾಗಲಕೋಟೆಯವರು ಮತ್ತು ನನ್ನ ತಾಯಿ ರಾಯಚೂರಿನವರು. ನಾನು ಹುಟ್ಟಿ ಬೆಳೆದದ್ದು ಬೆಂಗಳೂರಿನಲ್ಲಿ. ನಾನು ಬಾಲ್ಡ್ವಿನ್ ಪ್ರೌಢಶಾಲೆ ಮತ್ತು ಸೇಂಟ್ ಜೋಸೆಫ್ ಕಾಲೇಜು, ಪಿಇಎಸ್‌ ವಿವಿಯಲ್ಲಿ ಓದಿದ್ದೇನೆ. ಈವರೆಗೆ ತಂತ್ರಜ್ಞಾನ ಕ್ಷೇತ್ರಕ್ಕೆ ಸಾಕಷ್ಟು ಕೊಡುಗೆ ನೀಡಿದ್ದೇನೆ. ಈಗ ಬಹು ನಿರೀಕ್ಷೆಯ ಕೃತಕ ಬುದ್ಧಿಮತ್ತೆ ಕ್ಷೇತ್ರಕ್ಕೆ ಕೊಡುಗೆ ನೀಡಲು ಉತ್ಸುಕನಾಗಿದ್ದೇನೆ’ ಎಂದಿದ್ದಾರೆ.

Read more Articles on