ಮುಚ್ಚುವ ಭೀತಿಯಲ್ಲಿ ತಾರಾನಾಥ ಕಾಲೇಜಿನ ಫಿಜಿಯೋಥೆರಪಿ, ನ್ಯಾಚರೋಪತಿ ವಿಭಾಗ!ಬಳ್ಳಾರಿ, ರಾಯಚೂರು, ಕೊಪ್ಪಳ ಜಿಲ್ಲೆ ಸೇರಿದಂತೆ ನೆರೆ ಆಂಧ್ರ, ತೆಲಂಗಾಣ ರಾಜ್ಯಗಳಿಂದ ಆಯುರ್ವೇದ ಚಿಕಿತ್ಸೆಗೆಂದು ಬರುವವರಿಗೆ ವರವಾಗಿ ಪರಿಣಮಿಸಿದ್ದ ಇಲ್ಲಿನ ತಾರಾನಾಥ ಸರ್ಕಾರಿ ಆಯುರ್ವೇದ ಕಾಲೇಜಿನಲ್ಲಿ ಫಿಜಿಯೋಥೆರಪಿ ಹಾಗೂ ನ್ಯಾಚರೋಪತಿ ವಿಭಾಗಗಳು ಬಂದ್ ಆಗುವ ಭೀತಿ ಎದುರಾಗಿದೆ.