ಇಂದಿನಿಂದ 11ರವರೆಗೆ ದಶಮಾನೋತ್ಸವದ ದುರ್ಗಾಮಾತಾ ದೌಡಹಿಂದೂ ಧರ್ಮದ ಅರಿವು ಮೂಡಿಸುತ್ತಾ ಧರ್ಮ, ಸಂಸ್ಕೃತಿ ಉಳಿವು, ಬೆಳವಣಿಗೆಗೆ ಒತ್ತು ನೀಡುವ ಮೂಲಕ ಸಮಾಜದ ಉದ್ಧಾರಕ್ಕಾಗಿ ಶ್ರಮಸುತ್ತಿರುವ ವಿಶ್ವಹಿಂದೂ ಪರಿಷತ್ ಸಂಘಟಣೆಗೆ 60 ವರ್ಷ ತುಂಬಿ ಷಷ್ಠಬ್ಧಿ ಸಂಭ್ರಮದಲ್ಲಿರುವ ಹಿನ್ನೆಲೆಯಲ್ಲಿ ಭಜರಂಗದಳ ಸಂಘಟಣೆಯೊಂದಿಗೆ ಪಟ್ಟಣದಲ್ಲಿ 10 ವರ್ಷದ ದಶಮಾನೋತ್ಸವದ ದುರ್ಗಾಮಾತಾ ದೌಡ ಕಾರ್ಯಕ್ರಮವನ್ನು ಅ.3 ರಿಂದ 11 ರವರೆಗೆ 9 ದಿನಗಳ ಕಾಲ ಪ್ರತಿ ದಿನ ಬೆಳಗ್ಗೆ 6 ಗಂಟೆಯಿಂದ ಅದ್ಧೂರಿಯಾಗಿ ಆಚರಿಸಲಾಗುವುದು ಎಂದು ವಿಶ್ವ ಹಿಂದೂ ಪರಿಷತ ಜಿಲ್ಲಾಧ್ಯಕ್ಷ ಪ್ರಮೋದಕುಮಾರ ವಕ್ಕುಂದಮಠ ಹೇಳಿದರು.