ಸೊಗಲ ಸೋಮೇಶ್ವರನ ದೇವಸ್ಥಾನದಲ್ಲಿ ಜನಸಾಗರದಕ್ಷಿಣ ಕಾಶಿಯಂದೆ ಪ್ರಸಿದ್ಧಿ ಪಡೆದ ಉತ್ತರ ಕರ್ನಾಟಕ ಭಾಗದ ಶ್ರೀಕ್ಷೇತ್ರ ಸೊಗಲ ಸೋಮೇಶ್ವರನ ದೇವಸ್ಥಾನದ ಸನ್ನಿಧಾನದಲ್ಲಿ ಧುಮುಕುತ್ತಿರುವ ಜಲಪಾತದಲ್ಲಿ ಎಳ್ಳು, ಹರಿಶಿನ ಮೈಗೆ ಹಚ್ಚಿಕೊಂಡು ಸ್ನಾನ ಮಾಡಿ ಲಕ್ಷಾಂತರ ಭಕ್ತರು ಕರ್ನಾಟಕ, ಸೇರಿದಂತೆ ಹೊರ ರಾಜ್ಯಗಳಿಂದ ಆಗಮಿಸಿದ್ದ ಭಕ್ತ ಸಮೂಹ, ಸಾಗರೋಪಾದಿಯಲ್ಲಿ ಹರಿದು ಬಂದು ಭಾನುವಾರ ಹಾಗೂ ಸೋಮವಾರ ದೇವರ ದರ್ಶನ ಪಡೆದರು. ಎಲ್ಲಿ ನೋಡಿದರಲ್ಲಿ ಜನಸಾಗರದಿಂದ ಕ್ಷೇತ್ರ ಕಿಕ್ಕಿರಿದಿತ್ತು.